ನವದೆಹಲಿ, ಅ.19 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ ಡೇಂಘಿ ಹಾವಳಿ ಹೆಚ್ಚಾಗಿ ದ್ದು, ಮಾರಣಾಂತಿಕ ರೋಗಕ್ಕೆ ಒಬ್ಬರು ಬಲಿಯಾಗಿದ್ದಾರೆ.
ಅಕ್ಟೋಬರ್ ಒಂದೇ ತಿಂಗಳಲ್ಲಿ 382 ಡೇಂಘಿ ಪ್ರಕರಣಗಳು ವರದಿಯಾಗಿದ್ದು, ಒಟ್ಟು 723 ಪ್ರಕರಣಗಳು ಪತ್ತೆಯಾಗಿವೆ. ಸ್ಥಳೀಯ ಸಂಸ್ಥೆಯ ವರದಿ ಪ್ರಕಾರ ಒಬ್ಬರು ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. 2018ರ ಬಳಿಕ ಅತಿ ಹೆಚ್ಚು ಡೇಂಘಿ ಪ್ರಕರಣಗಳು ಅಕ್ಟೋಬರ್ ತಿಂಗಳಲ್ಲಿ ವರದಿಯಾಗಿವೆ.
ಮಳೆಯಿಂದ ನೀರು ನಿಲ್ಲುವುದು ಹೆಚ್ಚಾಗಿದೆ. ಸೊಳ್ಳೆ ಉತ್ಪಾದನೆ ಹೆಚ್ಚಾಗಿ ಡೇಂಘಿ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಕಳೆದ ಸೆಪ್ಟಂಬರ್ನಲ್ಲಿ 217 ಪ್ರಕರಣಗಳು ವರದಿಯಾಗಿದ್ದವು.