9 ಜನರನ್ನು ಲಾಕಪ್ ಒಳಗೆ ಇರಿಸಿ ಇಬ್ಬರು ಪೊಲೀಸರು ಲಾಠಿ ಬೀಸುತ್ತಿದ್ದರೆ ಅವರು ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು.
ಪೊಲೀಸರ ಮನಬಂದಂತೆ ಲಾಠಿ ಬೀಸುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಗಲಭೆ ಸೃಷ್ಟಿಸಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಎಂದು ಶೀರ್ಷಿಕೆ ಹಾಕಿದ್ದಾರೆ.
ಮಾಜಿ ಪತ್ರಕರ್ತರೂ ಆಗಿರವ ಶಾಸಕ ಶಲಾಬ್ ಮನಿ ತ್ರಿಪಾಠಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತ್ರಿಪಾಠಿ ಘಟನೆಯ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೂ ಅಲ್ಲದೇ ಗಲಭೆ ಮಾಡಿದವರಿಗೆ ತಕ್ಕ ಉಡುಗೊರೆ ಎಂದು ವೀಡಿಯೋ ಹಂಚಿಕೊಂಡಿದ್ದಾರೆ.