ಕೇಂದ್ರ ಸರಕಾರದ ನೋಟು ನಿಷೇಧದಿಂದಾಗಿ 1000 ಮತ್ತು 500 ರೂ.ನೋಟುಗಳಿಂದ ಮುಕ್ತಿ ಪಡೆಯಲು ಜನ ಬ್ಯಾಂಕ್‌ಗಳಲ್ಲಿ ಕ್ಯೂ ನಿಂತಿರುವಂತೆಯೇ, ಕೋಲ್ಕತಾದ ಬುರ್ರಾ ಬಜಾರ್ ಕಾಳಸಂತೆಯಲ್ಲಿ 500 ಮತ್ತು 1000 ರೂ ನೋಟಗಳಿಗೆ 550 ಮತ್ತು 1100 ರೂಪಾಯಿಗಳನ್ನು ನೀಡಿ ಖರೀದಿಸಲಾಗುತ್ತಿದೆ.
ಕಳೆದ ತಿಂಗಳು 500 ಮತ್ತು 1000 ರೂಪಾಯಿಗಳ ನೋಟುಗಳ ಬದಲಿಗೆ, 400 ಮತ್ತು 850 ರೂಪಾಯಿಗಳನ್ನು ಚಿಲ್ಲರೆಯಾಗಿ ನೀಡುತ್ತಿದ್ದ ವಹಿವಾಟುದಾರರು ಇದೀಗ ಉಲ್ಟಾ ಹೊಡೆದಿದ್ದಾರೆ.
ಕಂಪೆನಿಗಳು ಡಿಸೆಂಬರ್ 31 ರಂದು ಮೂರನೇ ತ್ರೈಮಾಸಿಕ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲೆನ್ಸ್ ಶೀಟ್‌ನಲ್ಲಿ ಬೃಹತ್ ವಹಿವಾಟು ತೋರಿಸಲು ನಗದು ಹಣ ಸಂಗ್ರಹಕ್ಕೆ ಮುಂದಾದ ಹಿನ್ನೆಲೆಯಲ್ಲಿ 500 ರೂಪಾಯಿಗಳಿಗೆ 550 ಮತ್ತು 1000 ರೂ.ನೋಟಿಗೆ 1100 ರೂಪಾಯಿಗಳನ್ನು ನೀಡಿ ಖರೀದಿಸಲಾಗುತ್ತಿದೆ.
ಬ್ಯಾಲೆನ್ಸ್ ಶೀಟ್‌ನಲ್ಲಿ ಕ್ಯಾಶ್ ಇನ್ ಹ್ಯಾಂಡ್‌ಗಾಗಿ ಕಂಪೆನಿಗಳು ಸಣ್ಣ ಹಣದ ಪಾವತಿಗಳಿಗಾಗಿ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸಿಡುತ್ತದೆ. ಆದರೆ, ನಗದು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡುವುದಿಲ್ಲ. ಹೆಚ್ಚಿನ ನಗದು ವಹಿವಾಟು ತೋರಿಸಲು ಕಂಪೆನಿಗಳು 500 ರೂ ಮತ್ತು 1000 ರೂ. ನೋಟುಗಳ ಸಂಗ್ರಹಕ್ಕಾಗಿ ಹೊಸ ಹೊಸ ದಾರಿಯನ್ನು ಹುಡುಕುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.