ಹೊಸ ಸರಕಾರ ರಚನೆಗೆ ಅವಕಾಶ ನೀಡಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ಓ.ಪನ್ನೀರ್‌ಸೆಲ್ವಂಗೆ ಸರಕಾರ ರಚಿಸಲು ಮತ್ತೊಂದು ಅವಕಾಶ ಸಿಗುವುದು ಡೌಟು ಎಂದು ಮೂಲಗಳು ತಿಳಿಸಿವೆ.
ಶಶಿಕಲಾ ಅವರಿಗೆ ಸರಕಾರ ರಚಿಸಲು ಅವಕಾಶ ನೀಡಬೇಕಾ ಅಥವಾ ಶಶಿಕಲಾ ವಿರುದ್ಧದ ಪ್ರಕರಣದ ತೀರ್ಪು ಬರುವವರೆಗೂ ಕಾಯಬೇಕಾ ಎನ್ನುವ ಬಗ್ಗೆ ರಾಜ್ಯಪಾಲರು ಇಂದು ಸಂಜೆಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ನಿನ್ನೆ ಸಂಜೆ ಪನ್ನೀರ್ ಸೆಲ್ವಂ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದೇನೆ. ಇದೀಗ ರಾಜೀನಾಮೆ ಹಿಂಪಡೆಯಲು ಸಿದ್ದ ಎಂದು ಮನವಿ ಸಲ್ಲಿಸಿದ್ದರು. ಶಶಿಕಲಾ ಕೂಡಾ ತಮ್ಮ ಬಳಿ 130 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ ಸರಕಾರ ರಚಿಸಲು ಅಹ್ವಾನ ನೀಡುವಂತೆ ಕೋರಿದ್ದರು.
ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ಅವರ ಮನವಿ ಪತ್ರಗಳನ್ನು ಕಾನೂನು ತಜ್ಞರಿಗೆ ರವಾನಿಸಿದ ರಾಜ್ಯಪಾಲರು ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.