ತಿರುಪತಿ: ಮೂವತ್ತು ವರ್ಷ ಇತಿಹಾಸವಿರುವ ತಿರುಪತಿ ತಿಮ್ಮಪ್ಪನ ಲಡ್ಡುವಿನ ಸ್ವಾದದ ಜತೆಗೆ, ನಟ್ಟು, ಬೋಲ್ಟ್, ಪಾನ್'ಪರಾಗ್'ನಂತಹ ಅನುಪಯುಕ್ತ ವಸ್ತುಗಳು ಸಹ ಪ್ರಸಾದ ರೂಪದಲ್ಲಿ ದೊರೆಯುತ್ತದೆ?
ಆಶ್ಚರ್ಯ ಆಯ್ತಾ.. ಹೀಗೊಂದು ಮಾಹಿತಿ ವಾಹಿನಿಯೊಂದು ಹೊರಹಾಕದೆ. ಬಾಯಲ್ಲಿ ನೀರುರಿಸುವ ಲಡ್ಡುವಿನಲ್ಲಿ ಅನುಪಯುಕ್ತ ವಸ್ತುಗಳು ಸೇರುತ್ತಿವೆಯಂತೆ. ಈ ಕುರಿತು ಭಕ್ತರು ಸಹ ಆರೋಪಿಸಿದ್ದಾರೆ ಎನ್ನಲಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಲಡ್ಡು ತಯಾರಿಕೆ ವೇಳೆ ಸ್ವಚ್ಛತೆ ಕುರಿತು ಗಮನ ಹರಿಸದಿರುವುದು. ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದು, ಬೆಂಗಳೂರಿನ ವಕೀಲ ನರಸಿಂಹಮೂರ್ತಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದಾರೆ.
ಲಡ್ಡು ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಕಾಯ್ದೆ -2006ರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಕಳೆದ ಜೂನ್ ತಿಂಗಳಲ್ಲಿ ದೆಹಲಿಯಲ್ಲಿರುವ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅದರಂತೆ ಆಂಧ್ರ ಸರ್ಕಾರ ತಿರುಪತಿ ತಿಮ್ಮಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಲಡ್ಡು ತಯಾರಿಕಾ ವಿಧಾನದಲ್ಲಿ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕೆಂದು ಸೂಚನೆ ನೀಡಿತ್ತು. ಆದರೆ ಆಂಧ್ರ ಸರ್ಕಾರದ ಸೂಚನೆಗೂ ತಿರುಪತಿ ಕಾರ್ಯನಿರ್ವಾಹಕ ಅಧಿಕಾರಿ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಈಗ ದೂರುದಾರ ನರಸಿಂಹಮೂರ್ತಿ ತಿರುಪತಿ ತಿಮ್ಮಪ್ಪ ಆಡಳಿತಾಧಿಕಾರಿ ವಿರುದ್ಧ ಲೀಗಲ್ ನೊಟೀಸ್ ಕೊಟ್ಟು ಬಳಿಕ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ