Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತ್ತೀಗ ಹಸು, ಎಮ್ಮೆಗಳಿಗೂ ಆಧಾರ ಕಾರ್ಡ್

ಮತ್ತೀಗ ಹಸು, ಎಮ್ಮೆಗಳಿಗೂ ಆಧಾರ ಕಾರ್ಡ್
ನವದೆಹಲಿ , ಗುರುವಾರ, 5 ಜನವರಿ 2017 (13:35 IST)
ದೇಶವಾಸಿಗಳಂತೆ  ಹಸು ಮತ್ತು ಎಮ್ಮೆಗಳಿಗೆ ಸಹ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶದಲ್ಲಿರುವ 8.8ಕೋಟಿ ಗೋವು ಮತ್ತು ಎಮ್ಮೆಗಳಿಗೆ ಸರ್ಕಾರ ಆಧಾರ್ ಕಾರ್ಡ್‌ನಂತಹ ಗುರುತು ಪತ್ರವನ್ನು ನೀಡಲಿದೆ.

12 ಅಂಕಿಗಳ ಗುರುತಿನ ಸಂಖ್ಯೆಯನ್ನು ಒಂದು ವರ್ಷದೊಳಗೆ ನೀಡುವ ಅಭಿಯಾನವನ್ನು ನವವರ್ಷದ ಮೊದಲ ದಿನದಿಂದಲೇ ಆರಂಭಿಸಲಾಗಿದ್ದು, ಈಗಾಗಲೇ 1 ಲಕ್ಷ ತಂತ್ರಜ್ಞರು 50,000 ಟ್ಯಾಬ್ಲೆಟ್‌ಗಳೊಂದಿಗೆ ಹಳ್ಳಿಗಳತ್ತ ನಡೆದಿದ್ದಾರೆ.
 
ಈ ಯೋಜನೆಯಡಿಯಲ್ಲಿ ಪಾಲಿಯುರೇಥೇನ್ ಟ್ಯಾಗ್‌ನ್ನು  ಜಾನುವಾರುಗಳ ಕಿವಿಯೊಳಗೆ ಸಿಲುಕಿಸಲಾಗುತ್ತದೆ. ದೀರ್ಘಕಾಲ ಬಾಳಿಕೆ ಬರುವ ಈ ಟ್ಯಾಗ್‌ 8 ಗ್ರಾಂ ತೂಕವಿದ್ದು ತಲಾ 8 ರೂಪಾಯಿ ವೆಚ್ಚವಾಗುತ್ತದೆ. ಇದನ್ನು ಪ್ರಾಣಿಗಳಿಗೆ ಅಳವಡಿಸುವಾಗ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
 
ದೇಶದಲ್ಲಿ 4.1 ಕೋಟಿ ಎಮ್ಮೆ ಹಾಗೂ 4.7 ಕೋಟಿ ಗೋವುಗಳಿದ್ದು, ಈ ಪೈಕಿ ಉತ್ತರಪ್ರದೇಶವೊಂದರಲ್ಲೇ 1.6 ಕೋಟಿ ರಾಸುಗಳಿವೆ.
 
ಒಮ್ಮೆ ದನಗಳ ಕಿವಿಯೊಳಗೆ ಟ್ಯಾಗ್ ತೂರಿಸಿದ ಬಳಿಕ ಅದರ ಗುರುತಿನ ಸಂಖ್ಯೆಯನ್ನು ಅಂತರ್ಜಾಲ ಡಾಟಾಬೇಸ್‌ನಲ್ಲಿ ನಮೂದಿಸಲಾಗುತ್ತದೆ. ಜತೆಗೆ ಅದರ ಮಾಲೀಕರಿಗೆ ವಿಶಿಷ್ಟ ಗುರುತಿನ ಸಂಖ್ಯೆಯುಳ್ಳ ಪ್ರಾಣಿ ಆರೋಗ್ಯ ಕಾರ್ಡ್‌ನ್ನು ವಿತರಿಸಲಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ಅವನ ರಾಸುಗಳಿಗೆ ಚುಚ್ಚುಮದ್ದು ಕೊಡಿಸಿರುವ ಬಗ್ಗೆ ಮಾಹಿತಿ, ಸಂತಾನ ವಿವರ ಸೇರಿದಂತೆ ಮತ್ತಿತರ ವಿವರಗಳಿವೆ. 
 
ಇದು ಪ್ರಧಾನಿಯವರ ದೂರದೃಷ್ಟಿಯ ಯೋಜನೆಯಾಗಿದ್ದು ರಾಸುಗಳ ಮೇಲೆ ನಿಗಾ ಇಡುವುದು ಇದರ ಹಿಂದಿನ ಉದ್ದೇಶ. ಕಾಲಕಾಲಕ್ಕೆ ಚುಚ್ಚುಮದ್ದು ಸಿಗುತ್ತದೆಯೇ ಎಂಬ ಮಾಹಿತಿ ಸಂಗ್ರಹಿಸುವುದು, ಉತ್ತಮ ಸಂತಾನ ಕ್ರಿಯೆ, ಹಾಲು ಉತ್ಪಾದನೆ ಹೆಚ್ಚಳದ ಮೂಲಕ 2022ರ ವೇಳೆಗೆ ಡೈರಿ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿಯನ್ನು ಸಹ ಹೊಂದಲಾಗಿದೆ. 
 
ಈ ವರ್ಷದಂತ್ಯದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಸರ್ಕಾರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿಗಳ ಅರೆಸ್ಟ್: ಇಲ್ಲಿದೆ ಸಂಪೂರ್ಣ ಡಿಟೇಲ್ಸ್