ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಲು ಬಯಸುತ್ತೀರಾ? ಹಾಗಾದ್ರೆ, ಕೇಂದ್ರ ಸರಕಾರ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಲ್ಲಿ ಮೋದಿಯವರನ್ನು ನೇರ ಭೇಟಿ ಮಾಡುವ ಸುವರ್ಣಾವಕಾಶ ನಿಮ್ಮದಾಗಲಿದೆ.
ವರದಿಗಳ ಪ್ರಕಾರ, ಮೋದಿ ನೇತೃತ್ವದ ಸರಕಾರ ಎರಡು ವರ್ಷಗಳ ಅವಧಿಯ ಸಾಧನೆಗಳಿಗೆ ಸಂಬಂಧಿಸಿದಂತೆ 20 ಪ್ರಶ್ನೆಗಳನ್ನು ಕೇಳಲಾಗುವುದು. ಕೇವಲ ಐದು ನಿಮಿಷದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ವಿಜೇತರು ಮೋದಿಯವರನ್ನು ಭೇಟಿ ಮಾಡಿ ಅವರ ಹಸ್ತಾಕ್ಷರವಿರುವ ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಜನತೆ ಎಷ್ಟರ ಮಟ್ಟಿಗೆ ಮಾಹಿತಿ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲು ಮೈಗವರ್ನಮೆಂಟ್ ಡಾಟ್ ಇನ್ ಪೋರ್ಟಲ್‌ನಲ್ಲಿ ಗವರ್ನಸ್ ಕ್ವಿಜ್ ಆರಂಭಿಸಿದೆ.
ಕಳೆದ 2015-16ರಲ್ಲಿ ಎಷ್ಟರ ಮಟ್ಟಿಗೆ ಸೋಲಾರ್ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು, ನೇರ ಹಣ ವರ್ಗಾವಣೆ ಯೋಜನೆಯಲ್ಲಿ ಎಷ್ಟು ಹಣ ವರ್ಗಾಯಿಸಲಾಗಿದೆ. ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಸರಿಯಾದ ಉತ್ತರಗಳನ್ನು ನೀಡಿ ಹೆಚ್ಚು ಅಂಕಗಳಿಸಿದವರಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ಅವಕಾಶಗಳು ದೊರೆಯಲಿದೆ. ಒಂದು ವೇಳೆ ಇಬ್ಬರು ವಿಜೇತರು ಒಂದೇ ರೀತಿಯ ಅಂಕಗಳಿಸಿದಲ್ಲಿ ಕಡಿಮೆ ಸಮಯ ತೆಗೆದುಕೊಂಡುವರನ್ನು ವಿಜೇತರು ಎಂದು ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.