Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೋಟು ನಿಷೇಧ ಕಪ್ಪು ಹಣದ ವಿರುದ್ಧ ದಾಳಿಯಲ್ಲ, ಆರ್ಥಿಕ ದರೋಡೆ: ರಾಹುಲ್ ಗಾಂಧಿ

ನೋಟು ನಿಷೇಧ ಕಪ್ಪು ಹಣದ ವಿರುದ್ಧ ದಾಳಿಯಲ್ಲ, ಆರ್ಥಿಕ ದರೋಡೆ: ರಾಹುಲ್ ಗಾಂಧಿ
ಅಲ್ಮೋರಾ , ಶನಿವಾರ, 24 ಡಿಸೆಂಬರ್ 2016 (12:01 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ಕಪ್ಪು ಹಣದ ಅಥವಾ ಭ್ರಷ್ಟಾಚಾರದ ವಿರುದ್ಧವಲ್ಲ.ಆದರೆ ಇದೊಂದು ಆರ್ಥಿಕ ದರೋಡೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
 
ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಶೇ.99 ರಷ್ಟು ಜನತೆಯನ್ನು ತೊಂದರೆಗೆ ಸಿಲುಕಿಸಿದ್ದಲ್ಲದೇ ಕಪ್ಪು ಹಣ ಹೊಂದಿದ ಶೇ.1 ರಷ್ಟು ಭಾರಿ ಶ್ರೀಮಂತರನ್ನು ಗುರಿಯಾಗಿಸಿಲ್ಲ ಎಂದು ಟೀಕಿಸಿದರು.
 
ದೇಶದಲ್ಲಿ ಭ್ರಷ್ಟಾಚಾರವನ್ನು ಹೊಗಲಾಡಿಸಬೇಕು ಎನ್ನುವುದೇ ಕಾಂಗ್ರೆಸ್ ಪಕ್ಷದ ಬಯಕೆ. ಅದಕ್ಕಾಗಿ ಪ್ರಧಾನಿ ಮೋದಿ ಯಾವುದೇ ಕ್ರಮ ತೆಗೆದುಕೊಂಡರೂ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಎಂದರು.
 
ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ನಿಷೇಧ ಕಪ್ಪು ಹಣದ ಅಥವಾ ಭ್ರಷ್ಟಾಚಾರದ ವಿರುದ್ಧವಲ್ಲ.ಆದರೆ ಇದೊಂದು ಆರ್ಥಿಕ ದರೋಡೆಯಾಗಿದೆ. ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿದವರ ಹೆಸರುಗಳನ್ನು ಪ್ರಧಾನಿ ಮೋದಿ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
 
ಸ್ವಿಸ್ ಸರಕಾರ ಪ್ರಧಾನಿ ಮೋದಿ ಸರಕಾರಕ್ಕೆ ಕಪ್ಪು ಹಣ ಹೊಂದಿದವರ ಪಟ್ಟಿಯನ್ನು ನೀಡಿದೆ. ಕಪ್ಪು ಹಣ ಹೊಂದಿದವರ ಪಟ್ಟಿಯನ್ನು ಮೋದಿ ಸರಕಾರ ಯಾಕೆ ಲೋಕಸಭೆ ಅಥವಾ ರಾಜ್ಯಸಭೆಯ ಮುಂದಿಡುತ್ತಿಲ್ಲ. ಅವರು ಯಾರು ಎನ್ನುವುದು ಸದನಕ್ಕೆ ತಿಳಿಯಬೇಕಾಗಿದೆ. ಆದ್ದರಿಂದ, ಮೋದಿಯವರೇ ಕಪ್ಪು ಹಣ ಹೊಂದಿದ ಕುಳಗಳ ಹೆಸರುಗಳನ್ನು ಸದನದ ಮುಂದಿಡಿ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಎರಡು ಬಣ್ಣಗಳಲ್ಲಿ ರೆಡ್‌ಮಿ ನೋಟ್ 4