ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಸಂಪೂರ್ಣ ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸುತ್ತಿದ್ದ 'ರೋಮನ್ ಚಕ್ರವರ್ತಿ ನೀರೋ'ಗೆ ಹೋಲಿಸಿದ್ದಾರೆ.
ನೋಟು ನಿಷೇಧವನ್ನು ವಿರೋಧಿಸಿ ಡಿಸೆಂಬರ್ 8ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ್ದು ದಿಟ್ಟ ನಿರ್ಧಾರವಲ್ಲ. ಹಿಂದೆಮುಂದೆ ವಿಚಾರಿಸದೇ ಕೈಗೊಂಡ ಮೂರ್ಖತನದ ನಿರ್ಧಾರ. ಇದು ಬಡವರ, ರೈತರ ಮತ್ತು ದಿನಗೂಲಿ ಕಾರ್ಮಿಕರ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ದೊಡ್ಡ ಮುಖಬೆಲೆ ನೋಟುಗಳ ನಿಷೇಧ ಬಳಿಕ ಪೇಟಿಎಂ ಹಾಗೂ ಇ-ವಾಲೆಟ್ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಪೇಟಿಎಂ ಅಂದರೆ 'ಪೇ ಟು ಮೋದಿ' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ನಗದು ರಹಿತ ವಹಿವಾಟಿನಿಂದ ಕೆಲವರಿಗಷ್ಟೇ ಅನುಕೂಲವಾಗಲಿದೆ. ಇದರಿಂದ ಜನಸಾಮಾನ್ಯರಿಗೆ ಅನಾನುಕೂಲವೇ ಹೆಚ್ಚು. ಜನರು ಪರದಾಡುತ್ತಿದ್ದರೆ ಮೋದಿ ನಗುತ್ತಿದ್ದಾರೆ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.