ಲಖೌನ್ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಭಗವಾನ್ ಹನುಮಂತನನ್ನು ದಲಿತ ಎಂದು ಹೇಳಿದ್ದರು, ಹಾಗೇ ಬಿಜೆಪಿ ಮುಖಂಡ ಬಕ್ಕಲ್ ನವಾಬ್ ಹನುಮಾನ್ ಮುಸ್ಲಿಂ ಎಂದಿದ್ದರು. ಆದರೆ ಇದೀಗ ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ್ ಚೌದರಿ ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ. ಆತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನನ್ನ ಪ್ರಕಾರ ಆಂಜನೇಯ ತಮ್ಮ ಜಾಟ್ ಸಮುದಾಯಕ್ಕೆ ಸೇರಿದವರಾಗಿರಬೇಕು. ಏಕೆಂದರೆ ಯಾರಾದರೂ ಸಮಸ್ಯೆಯಲ್ಲಿದ್ದರೆ ಹಿಂದೆ ಮುಂದೆ ಯೋಚನೆ ಮಾಡದೇ ಜಾಟ್ ಸಮುದಾಯದವರು ಅಕಾಡಕ್ಕೆ ಇಳಿದು ನೆರವು ನೀಡುತ್ತಾರೆ.
ಅಂತೆಯೇ ಹನುಮಂತ ಕೂಡ ರಾಮನ ಪತ್ನಿಯನ್ನು ರಾವಣ ಅಪಹರಿಸಿದ್ದಾಗ ಹಿಂದೆ ಮುಂದೆ ಯೋಚನೆ ಮಾಡದೇ ಸಮುದ್ರದ ಮೇಲೆ ಹಾರಿದ್ದ. ಹೀಗಾಗಿ ಹನುಮಂತನ ಗುಣ ಜಾಟ್ ಸಮುದಾಯಕ್ಕೆ ಹತ್ತಿರವಾಗಿದ್ದು, ಇದೇ ಕಾರಣಕ್ಕೆ ಅವರು ಜಾಟ್ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.