ಪಶ್ಚಿಮ ಬಂಗಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೇಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸುವ ಅಗತ್ಯತ್ತೆಯನ್ನು ಒತ್ತಿ ಹೇಳಿದ್ದಾರೆ ಎಂದು ರಾವತ್ ಈ ವೇಳೆ ಹೇಳಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಈ ಬಗ್ಗೆ ಈಗಾಗಲೇ ಹಲವು ಭಾರೀ ಚರ್ಚಿಸಿದ್ದಾರೆ. ಮುಂಬೈನಲ್ಲಿ ಈ ಬಗ್ಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ನಿರುದ್ಯೋಗ, ಹಣದುಬ್ಬರ, ಕೇಂದ್ರಿಯ ತನಿಖಾ ಸಂಸ್ಥೆಗಳ ದುರುಪಯೋಗ, ಕೋಮು ಸೌಹಾರ್ದ ಕದಡುವಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ಗಮನಾರ್ಹ ವಿಚಾರ ಎನೆಂದರೆ ಇತ್ತೀಚಿಗೆ ದೇಶದಲ್ಲಿ ಕೋಮು ಸೌಹಾರ್ದ ಕಡದುತ್ತಿರುವ ಬಗ್ಗೆ 13 ವಿರೋಧ ಪಕ್ಷದ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮುಂದುವರೆದು ರಾಮನವಮಿ ಹಾಗೂ ಹನುಮ ಜಯಂತಿ ಮೆರವಣಿಗೆಯ ವೇಳೆ ಆಗುತ್ತಿರುವ ದಾಳಿಗಳು ರಾಜಕೀಯ ಪ್ರಾಯೋಜಿತ. ಮೇ 3ರ ಒಳಗೆ ಮಸೀದಿಗಳ ಮೇಲೆ ಹಾಕಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು ಎಂದು ರಾಜ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿ ಹೊಸ ಹಿಂದೂ ಓವೈಸಿ ಎಂದು ಟೀಕಿಸಿದ್ದಾರೆ.