Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬುಡಕಟ್ಟು ಜನರ ಭೂಮಿ ಕಬಳಿಸುವ ಹಕ್ಕಿಲ್ಲ: ಮೋದಿ

ಬುಡಕಟ್ಟು ಜನರ ಭೂಮಿ ಕಬಳಿಸುವ ಹಕ್ಕಿಲ್ಲ: ಮೋದಿ
ನವದೆಹಲಿ , ಬುಧವಾರ, 26 ಅಕ್ಟೋಬರ್ 2016 (16:20 IST)
ಅರಣ್ಯ ಸಂರಕ್ಷಣೆಯಲ್ಲಿ ಬುಡಕಟ್ಟು ಜನರ ಪಾತ್ರವನ್ನು ಮನಸಾರೆ ಹೊಗಳಿರುವ ಪ್ರಧಾನಿ ಮೋದಿ ಅವರ ಭೂಮಿಯನ್ನು ಕಬಳಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

 
ನವದೆಹಲಿಯಲ್ಲಿ ಮೊದಲ ರಾಷ್ಟ್ರೀಯ ಬುಡಕಟ್ಟು ಕಾರ್ನಿವಲ್, ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಬಡಕಟ್ಟು ಜನಾಂಗದವರು ತಮ್ಮ ಹಕ್ಕನ್ನು ಪಡೆದಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳವುದು ಸರ್ಕಾರದ ಆದ್ಯ ಕರ್ತವ್ಯ. ಅವರ ಭೂಮಿಯನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದರು.  
 
ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂದಿನಿಂದ ಪ್ರಾರಂಭವಾಗಿರುವ ರಾಷ್ಟ್ರೀಯ ಬುಡಕಟ್ಟು ಕಾರ್ನಿವಲ್, ಮೂರು ದಿನ(ಅಕ್ಟೋಬರ್ 28)ಗಳವರೆಗೆ ನಡೆಯಲಿದೆ. 
 
ಭಾರತ 300 ಪ್ರಮುಖ ಬುಡಕಟ್ಟು ಗುಂಪುಗಳ ನೆಲೆಯಾಗಿದ್ದು, ಪ್ರತಿಯೊಂದು ಸಂಸ್ಕೃತಿ, ಆಚರಣೆ, ಸಂಪ್ರದಾಯ, ನಂಬಿಕೆ, ಮತ್ತು ಭಾಷೆಗಳಲ್ಲಿ ಪರಸ್ಪರ ಭಿನ್ನವಾಗಿದೆ.
 
2011ರ ಸಮೀಕ್ಷೆಯ ಪ್ರಕಾರ ದೇಶದಲ್ಲಿ 10.43ಕೋಟಿ ಬುಡಕಟ್ಟು ಜನಾಂಗದವರಿದ್ದು ದೇಶದ ಜನಸಂಖ್ಯೆಯಲ್ಲಿ ಅವರ ಪಾಲು  8.6%.
 
ದೇಶದ ಅನೇಕ ಕಡೆಗಳಲ್ಲಿ  ಅದರಲ್ಲೂ ಹೆಚ್ಚಿನದಾಗಿ ಮಧ್ಯ ಪ್ರದೇಶದಲ್ಲಿ ಬುಡಕಟ್ಟು ಜನರನ್ನು ಬಲವಂತವಾಗಿ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಗಳು ಹೇಳುತ್ತಿವೆ. 
 
1,600 ಬಡುಕಟ್ಟು ಕಲಾವಿದರು ಮತ್ತು ದೇಶದ ಮೂಲೆ ಮೂಲೆಗಳಿಂದ ಸುಮಾರು 8,000 ಬುಡಕಟ್ಟು ಪ್ರತಿನಿಧಿಗಳನ್ನು ಸಮಾವೇಶಕ್ಕೆ ಸ್ವಾಗತಿಸಿದ ಮೋದಿ, ತಾನು ಬುಡಕಟ್ಟು ಪ್ರಾಬಲ್ಯ ಪ್ರದೇಶಗಳಲ್ಲಿ ಕೆಲಸ ಮಾಡಿದ್ದಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಒತ್ತಡದಿಂದ ಯಡಿಯೂರಪ್ಪ ಆರೋಪ ಮುಕ್ತ: ಹರಿಪ್ರಸಾದ್ ಆರೋಪ