ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಯೋಧರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೈನಿಕರನ್ನ ಯಾರೂ ಪ್ರಶ್ನಿಸುವಂತಿಲ್ಲ. ಅವರು ಮಹಿಳೆಯರನ್ನ ಅಪಹರಿಸಬಹುದು. ರೇಪ್ ಮಾಡಬಹುದು ಮತ್ತು ಜನರನ್ನ ಶೂಟ್ ಮಾಡಬಹುದು ಎಂದಿದ್ದಾರೆ.
`ಅವರು ಯಾರಿಗೆ ಏನು ಬೇಕಾದರೂ ಮಾಡಬಹುದು. 4ಕ್ಕಿಂತ ಹೆಚ್ಚು ಜನ ಒಂದೇ ಕಡೆ ನಿಂತಿದ್ದರೆ ಅವರನ್ನ ಶೂಟ್ ಮಾಡಬಹುದು. ಯಾವುದೇ ಮಹಿಳೆಯನ್ನ ಹೊತ್ತೊಯ್ದು ರೇಪ್ ಮಾಡಬಹುದು. ಯಾರಿಗೂ ಅದನ್ನ ಪ್ರಶ್ನಿಸುವ ಹಕ್ಕಿಲ್ಲ. ಇದು ಆರ್ಮಿ ಇರುವ ರಾಜ್ಯದ ಪರಿಸ್ಥಿತಿ ಎಂದು ಹೇಳಿದ್ದಾರೆ.
ಮೇ 12ರಂದು ಕಣ್ಣೂರಿನಲ್ಲಿ ಆರೆಸ್ಸೆಸ್ ಮುಖಂಡನನ್ನ ಬರ್ಬರವಾಗಿ ಕೊಚ್ಚಿ ಕೊಂದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್, ಯೋಧರಿಗೆ ವಿಶೇಷ ಅಧಿಕಾರ ನೀಡುವ ಎಎಫ್ಎಸ್ಪಿಎ ಕಾಯ್ದೆ ಜಾರಿಗೆ ಒತ್ತಾಯಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ