ಚೆನ್ನೈ: ಎಐಎಡಿಎಂಕೆ ಪಕ್ಷ ಅಮ್ಮ ಜಯಲಲಿತಾ ಕಟ್ಟಿದ ಪಕ್ಷ. ಅದನ್ನು ಹೈಜಾಕ್ ಮಾಡಿ ಒಂದು ಕುಟುಂಬದ ತೆಕ್ಕೆಗೆ ಎಳೆದುಕೊಳ್ಳಲು ಯಾರಿಗೂ ಬಿಡಲ್ಲ ಎಂದು ಅಮ್ಮ ಬಂಟ ಹಂಗಾಮಿ ಮುಖ್ಯಮಂತ್ರಿ ಪನೀರ್ ಸೆಲ್ವಂ ಗುಡುಗಿದ್ದಾರೆ.
ತಮಿಳುನಾಡಿನಲ್ಲಿ ಶಶಿಕಲಾ ಮತ್ತು ಪನೀರ್ ಸೆಲ್ವಂ ನಡುವೆ ಅಧಿಕಾರಕ್ಕಾಗಿ ಹೋರಾಟ ತಾರಕಕ್ಕೇರಿದೆ. ರಾಜ್ಯಪಾಲರು ಸದ್ಯದ ಪರಿಸ್ಥಿತಿಯಲ್ಲಿ ಶಶಿಕಲಾಗೆ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕಾಯಲು ತೀರ್ಮಾನಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪನೀರ್ ಸೆಲ್ವಂಗೆ ಆನೆಬಲ ಬಂದಂತಾಗಿದೆ. ಶಶಿಕಲಾ ವಿರೋಧಿ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಅತ್ತ ಎಐಎಡಿಎಂಕೆ ಶಾಸಕರು ಇನ್ನೂ ರೆಸಾರ್ಟ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಸದ್ಯ ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಎಲ್ಲವೂ ಇತ್ಯರ್ಥವಾಗಲು ಇನ್ನೂ ಒಂದು ವಾರ ಬೇಕಾಗಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ