ನವದೆಹಲಿ : ಪೆಟ್ರೋಲ್ - ಡಿಸೇಲ್ ವಾಹನಗಳ ನಿಷೇಧದ ಕುರಿತು ಕೇಂದ್ರ ಸರ್ಕಾರದ ಚಿಂತನೆಗೆ ಬೇಸರಗೊಂಡಿದ್ದ ವಾಹನ ಸವಾರರಿಗೆ ಇದೀಗ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿಸುದ್ಧಿ ನೀಡಿದ್ದಾರೆ.
ನೀತಿ ಆಯೋಗ, ಮೂರು ಚಕ್ರದ ವಾಹನಗಳನ್ನು 2023ರ ಒಳಗೆ ಹಾಗೂ 150 ಸಿಸಿಗಿಂತ ಕಡಿಮೆ ಕ್ಷಮತೆಯುಳ್ಳ ವಾಹನಗಳ ಮೇಲೆ 2025ರೊಳಗೆ ನಿಷೇಧ ಹೇರಿ ಎಲೆಕ್ಟ್ರಾನಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿತ್ತು. ಇದು ವಾಹನ ಸವಾರರನ್ನು ಚಿಂತೆಗೀಡು ಮಾಡಿತ್ತು.
ಆದರೆ ಇದೀಗ ಈ ಬಗ್ಗೆ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಪೆಟ್ರೋಲ್-ಡಿಸೇಲ್ ವಾಹನದ ಮೇಲೆ ನಿಷೇಧ ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುವುದಿಲ್ಲವೆಂದಿದ್ದಾರೆ.