Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎನ್‌ಡಿಟಿವಿ ಪ್ರಸಾರ ನಿಷೇಧ: ಬಿಹಾರ್ ಸಿಎಂ ನಿತೀಶ್ ಕುಮಾರ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಎನ್‌ಡಿಟಿವಿ ಪ್ರಸಾರ ನಿಷೇಧ: ಬಿಹಾರ್ ಸಿಎಂ ನಿತೀಶ್ ಕುಮಾರ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
ಪಾಟ್ನಾ , ಶನಿವಾರ, 5 ನವೆಂಬರ್ 2016 (18:17 IST)
ಎನ್‌ಡಿಟಿವಿ ಚಾನೆಲ್‌ನ್ನು ಒಂದು ದಿನದ ಅವಧಿಗೆ ಬಂದ್ ಮಾಡುವಂತೆ ಆದೇಶಿಸಿದ ಕೇಂದ್ರ ಸರಕಾರದ ಆದೇಶದ ವಿರುದ್ಧ ವಾಗ್ದಾಳಿ ನಡೆಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಜಾಪ್ರಭುತ್ವದಲ್ಲಿ ಮುಕ್ತ, ಪಾರದರ್ಶಕ ಮಾಧ್ಯಮಗಳು ಅಗತ್ಯವಾಗಿವೆ ಎಂದು ಹೇಳಿದ್ದಾರೆ. 
 
ಕೇಂದ್ರ ಸರಕಾರ ಎನ್‌ಡಿಟಿವಿ ಚಾನೆಲ್‌ನ್ನು ಒಂದು ದಿನದ ಕಾಲಕ್ಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿರುವುದು ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗಿದೆ ಎಂದು ಕಿಡಿಕಾರಿದ್ದಾರೆ.
 
ಪಠಾನ್‌ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಕುರಿತಂತೆ ಬಿತ್ತರಿಸಿದ ವರದಿಯಲ್ಲಿ ಲೋಪದೋಷವಿದೆ ಎಂದು ಕೇಂದ್ರ ಸರಕಾರ ನವೆಂಬರ್ 8ರ ಮಧ್ಯರಾತ್ರಿಯಿಂದ ನವೆಂಬರ್ 9ರ ಮಧ್ಯರಾತ್ರಿಯವರಿಗೆ ಚಾನೆಲ್‌ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಮೋದಿ ಸರಕಾರ ಆದೇಶ ನೀಡಿದೆ.
 
ಇದಕ್ಕಿಂತ ಮೊದಲು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್‌ಡಿಟಿವಿ ಪ್ರಸಾರ ಸ್ಥಗಿತಕ್ಕೆ ಮೋದಿ ಸರಕಾರ ಆದೇಶ ನೀಡಿರುವುದು ನೋಡಿದಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ್‌ನಲ್ಲಿ ಬಿಜೆಪಿಯನ್ನು ಓಡಿಸಿದಂತೆ ಉ,ಪ್ರದೇಶದಲ್ಲೂ ಓಡಿಸುತ್ತೇವೆ: ಲಾಲು ಯಾದವ್