ನವದೆಹಲಿ: ಪ್ರಧಾನಿ ಮೋದಿ ಬಗ್ಗೆ ಸದಾ ಕೆಂಡ ಕಾರುತ್ತಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ರಾಷ್ಟ್ರಪತಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಿತ್ರರಾಗುತ್ತಿದ್ದಾರೆ. ವಿಪಕ್ಷ ನಾಯಕಿ ಸೋನಿಯಾ ಗಾಂಧಿಗೆ ಕೈ ಕೊಟ್ಟಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಯುಪಿಎಯ ಮಿತ್ರ ಪಕ್ಷಗಳಿಗೆ ಸೋನಿಯಾ ಗಾಂಧಿ ನಿನ್ನೆ ಔತಣಕೂಟ ಕರೆದಿದ್ದರು. ಆದರೆ ಅದಕ್ಕೆ ನಿತೀಶ್ ಗೈರಾಗಿದ್ದರು. ಇದು ಹಲವರ ಹುಬ್ಬೇರುವಂತೆ ಮಾಡಿತ್ತು.
ಆದರೆ ಇದೀಗ ನಿತೀಶ್ ಪ್ರಧಾನಿ ಮೋದಿ ಜತೆ ಔತಣಕೂಟಕ್ಕೆ ಮುಂದಾಗಿರುವುದು ಜೆಡಿಯು ಮತ್ತೆ ಬಿಜೆಪಿ ಸಖ್ಯ ಮಾಡುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ಜೆಡಿಯು ಮೂಲಗಳು ಇದನ್ನು ಅಲ್ಲಗಳೆಯುತ್ತಿವೆ.
ಇದು ಪಕ್ಕಾ ಅಫೀಶಿಯಲ್ ಮೀಟಿಂಗ್. ಇದರ ಹಿಂದೆ ಬೇರೆ ಯಾವ ರಾಜಕೀಯ ಉದ್ದೇಶಗಳಿಲ್ಲ ಎಂದು ಪಕ್ಷ ಹೇಳಿಕೊಂಡಿದೆ. ಬಿಹಾರಕ್ಕೆ ಸಿಗಬೇಕಾದ ಪರಿಹಾರ ಪ್ಯಾಕೇಜ್ ಗಳ ಕುರಿತು ಮಾತನಾಡಲು ನಿತೀಶ್ ಪ್ರಧಾನಿಯವರನ್ನು ಭೇಟಿ ಮಾಡುತ್ತಿದ್ದಾರಷ್ಟೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ