ಸಮುದ್ರದಲ್ಲಿ ದೋಣಿ ಮುಗುಚಿದ ಪರಿಣಾಮ 9 ಮಂದಿ ಜಲಸಮಾಧಿಯಾದ ದಾರುಣ ಘಟನೆ ತೂತುಕಡಿ ಜಿಲ್ಲೆಯ ಮನಪಡ್ ಬಳಿ ನಡೆದಿ
ದೆ.
10ಮಂದಿಯನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದು, ನಾಪತ್ತೆಯಾಗಿರುವವರಿಗಾಗಿ ಶೋಧ ನಡೆಸಲಾಗುತ್ತದೆ.
ಭಾನುವಾರ ಸಂಜೆ ಪ್ರವಾಸಿಗರ ತಂಡವೊಂದು ಮನಪಡ್ ಸಮುದ್ರತೀರಕ್ಕೆ ಆಗಮಿಸಿತ್ತು. ಮೀನುಗಾರಿಕೆಗೆ ಬಳಸುವ ನಾಡದೋಣಿಯನ್ನೇರಿದ ಅವರೆಲ್ಲ ಸಮುದ್ರವಿಹಾರಕ್ಕೆ ತೆರಳಿದ್ದರು.
ನೀರಿನಲ್ಲಿ ಸ್ವಲ್ಪ ದೂರ ಸಾಗುತ್ತಿದ್ದಂತೆ ಅಲೆಯೊಂದಕ್ಕೆ ಮುಗುಚಿ ದೋಣಿ ಮುಳುಗಿದೆ. ನೀರಿನಲ್ಲಿ ಮುಳುಗುತಿದ್ದರ ಕಿರುಚಾಟ ಕೇಳಿದ ಮೀನುಗಾರರು ತಕ್ಷಣ ಸಹಾಯಕ್ಕೆ ಧಾವಿಸಿದರೂ ಅಷ್ಟೊತ್ತಿಗೆ 9 ಮಂದಿ ಜಲಸಮಾಧಿಯಾಗಿದ್ದರು.19 ಮಂದಿಯನ್ನು ರಕ್ಷಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಮೀನುಗಾರಿಕೆ ದೋಣಿಯನ್ನು ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.