ಈ ವರ್ಷದ ಮಾರ್ಚ್‌ನಲ್ಲಿ ಬ್ರಸೆಲ್ಸ್ ವಿಮಾನನಿಲ್ದಾಣದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದ ಜೆಟ್ ಏರ್ ವೇಸ್ ಸಿಬ್ಬಂದಿ ನಿಧಿ ಚಪೇಕರ್ ಇಂದು ಬೆಳಿಗ್ಗೆ ಮುಂಬೈಗೆ ವಾಪಸಾಗಿದ್ದಾರೆ. ಅವರ ಚಿತ್ರವನ್ನು ಬೆಲ್ಜಿಯಂನಲ್ಲಿ ಭಯೋತ್ಪಾದನೆ ದಾಳಿಯ ಮುಖವಾಗಿ ಬಿಂಬಿಸಲಾಗಿತ್ತು.
ಭಯೋತ್ಪಾದನೆ ದಾಳಿಯಲ್ಲಿ ಇನ್ನೂ ಚೇತರಿಸಿಕೊಂಡಿರದ 42 ವರ್ಷ ವಯಸ್ಸಿನ ನಿಧಿ ಪ್ಯಾರಿಸ್ ಮುಂಬೈ ಜೆಟ್ ಏರ್‌ವೇಸ್ ಮೂಲಕ ಬೆಳಿಗ್ಗೆ 7.30ಕ್ಕೆ ಮುಂಬೈ ವಿಮಾನನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಅಲ್ಲಿಂದ ಬೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಯಿತು.
ನಿಧಿ ಚಾಪೇಕರ್ ಅವರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು, ಜನರ ಜತೆ ಸಂಪರ್ಕ ಹೊಂದದಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ನಿಧಿ ಚಾಪೇಕರ್ ನೆವಾರ್ಕ್ ಜೆಟ್ ಫ್ಲೈಟ್ ಏರುತ್ತಿದ್ದಂತೆ ಸ್ಫೋಟಗಳು ಸಂಭವಿಸಿತ್ತು.ಅವರಿಗೆ ಶೇ. 15ರಷ್ಟು ಸುಟ್ಟ ಗಾಯಗಳಾಗಿದ್ದು, ಹಿಮ್ಮಡಿ ಮೂಳೆ ಮುರಿದಿತ್ತು. ಅವರ ಸಹೋದ್ಯೋಗಿ ಅಮಿತ್ ಮೊಟ್ವಾನಿ ಕೂಡ ಗಾಯಗೊಂಡಿದ್ದು ಬ್ರಸೆಲ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಿಧಿ ಚಾಪೇಕರ್ ಅವರನ್ನು ಸುಮಾರು 25 ದಿನಗಳ ಕಾಲ ಚಲೆರಾಯ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರೇರಿತ ಕೋಮಾ ಸ್ಥಿತಿಯಲ್ಲಿರಿಸಿ ವ್ಯಾಪಕ ಚರ್ಮ ಕಸಿಯ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈಗಲೂ ವೀಲ್‌ಚೇರ್‌ನಲ್ಲಿರುವ ನಿಧಿ ಅವರನ್ನು ಪತಿ ರೂಪೇಶ್ ಚಾಪೇಕರ್ ಜತೆಗೂಡಿದ್ದಾರೆ.