ಭಯೋತ್ಪಾದಕರಿಗೆ ಪಾಕಿಸ್ತಾನದ ಮೂಲಕ ಆರ್ಥಿಕ ನೆರವು ಒದಗಿಸಿದ ಆರೋಪದಡಿ ಕಾರ್ಯಾಚರಣೆಗೆ ಮುಂದಾಗಿರುವ ರಾಷ್ಟ್ರೀಯ ತನಿಖಾ ತಂಡ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಹಲವೆಡೆ ಪ್ರತ್ಯೇಕತಾವಾದಿಗಳು ಮತ್ತು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಕಾಶ್ಮೀರದಲ್ಲಿ 14 ಕಡೆ ಮತ್ತು ದೆಹಲಿಯಲ್ಲಿ 8 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ಕುಕೃತ್ಯ ನಡೆಸಲು ಉಗ್ರರಿಗೆ ಹಣ ಒದಗಿಸಿದ ಆರೋಪದಡಿ ಈ ದಾಳಿ ನಡೆಸಲಾಗಿದೆ. ಉಗ್ರರಿಗೆ ಆರೋಪದಡಿ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳಿಗೆ ಸುಳಿವು ಸಿಕ್ಕ ಬಳಿಕ ದಾಳಿ ನಡೆಸಿದ್ದಾರೆ.
ಪ್ರತ್ಯೇಕತಾವಾದಿ ಮುಖಂಡರಾದ ನಯೀಮ್ ಖಾನ್, ಬಿಟ್ಟಾ ಕರಾಟೆ ಮತ್ತು ಖಾಸಿ ಜಾವೇದ್ ಬಾಬಾ ಮನೆಗಳ ಮೇಲೆ ದಾಳಿ ನಡೆದಿದ್ದು, ಕಾಶ್ಮೀರದಲ್ಲಿ ಗಲಭೆ ನಡೆಸಲು ಹಣ ಪಡೆದಿದ್ದಾಗಿ ಈ ಮೂವರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯ ಹವಾಲಾ ದಂಧೆಕೋರರ ಮನೆ ಮೇಲೂ ದಾಳಿ ನಡೆದಿದೆ.