ನವದೆಹಲಿ:ಜು-13:ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಕಸ ಹಾಕುವವರಿಗೆ 50,000 ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಆದೇಶ ನೀಡಿದೆ.
ಉನ್ನಾವೋ ಮತ್ತು ಹರಿದ್ವಾರದಲ್ಲಿನ ಗಂಗಾನದಿಯ ದಡದಿಂದ 500 ಮೀಟರ್ ವ್ಯಾಪ್ತಿವರೆಗೆ ಕಸ ಎಸೆಯಲು ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಜಸ್ಟೀಸ್ ಸ್ವತಂತ್ರ ಕುಮಾರ್ ನೇತೃತ್ವದ ಎನ್ ಜಿಟಿ ಪೀಠ ನಿರ್ದೇಶನ ನೀಡಿದೆ. ಅಲ್ಲದೇ 100 ಮೀಟರ್ ಗಳ ವ್ಯಾಪ್ತಿಯನ್ನು ಶೂನ್ಯ ಅಭಿವೃದ್ಧಿ ಪ್ರದೇಶ (no-development zone) ಎಂದು ಗುರುತಿಸಬೇಕೆಂದು ನ್ಯಾಯ ಪೀಠ ಆದೇಶ ನೀಡಿದೆ.
ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ನದಿಗೆ ಯಾವುದೇ ವಿಧದ ತ್ಯಾಜ್ಯವನ್ನು ಸುರಿದರೆ ಅಂತವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದೆ.