ನವವಿವಾಹಿತೆಯ ಮೇಲೆ ಆಕೆಯ ಪತಿ ಮತ್ತು ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಜಾರ್ಖಂಡ್ನ ಪಲಮಾವು ಜಿಲ್ಲೆ ರಹೈಯಾ ಗ್ರಾಮದಲ್ಲಿ ನಡೆದಿದೆ.
ಮುಖ್ಯ ಆರೋಪಿ ಅಫ್ಜಲ್ ಅನ್ಸಾರಿ ಕೆಲ ದಿನಗಳ ಹಿಂದೆ ಅದೇ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ ಎಂದು ಪೊಲೀಸ್ ಉಪ ಅಧೀಕ್ಷಕ ಹೀರಾಲಾಲ್ ರವಿ ತಿಳಿಸಿದ್ದಾರೆ.
ಪೀಡಿತೆ ನೀಡಿರುವ ದೂರಿನ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆಕೆ ದೂರಿನಲ್ಲಿ ಹೇಳಿರುವ ಪ್ರಕಾರ ಬುಧವಾರ ರಾತ್ರಿ ಮನೆಗೆ ಬರುವಾಗ ಆಕೆಯ ಪತಿ ತನ್ನ ಇಬ್ಬರು ಗೆಳೆಯರಾದ ಬಬ್ಲು ಸಿಂಗ್ ಮತ್ತು ಅಫ್ಜಲ್ ಮಿಯಾನ್ನನ್ನು ಕರೆ ತಂದಿದ್ದಾರೆ.
ಬಳಿಕ ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆತ, ಸ್ನೇಹಿತರಿಗೂ ಆಕೆಯ ಮೇಲೆ ಅತ್ಯಾಚಾರ ಎಸಗಲು ಅವಕಾಶ ಕಲ್ಪಿಸಿದ್ದಾನೆ. ಸಂಪೂರ್ಣ ಕುಕೃತ್ಯವನ್ನು ಚಿತ್ರಿಸಿಕೊಂಡ ಆರೋಪಿಗಳು ನಡೆದ ಕುಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಒಡ್ಡಿದ್ದಾರೆ.
ಮರುದಿನ ಅವರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದ ಮಹಿಳೆ ತಂದೆ ಪೋಷಕರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ್ದಾಳೆ. ಆದರೆ ಠಾಣಾಧಿಕಾರಿ ದೂರನ್ನು ಸ್ವೀಕರಿಸದೇ ಅವರನ್ನು ವಾಪಸ್ ಕಳುಹಿಸಿದ್ದಾನೆ.
ಕೃತ್ಯದ ಮಾಹಿತಿ ಪಡೆದ ಡಿಎಸ್ಪಿ ದೂರನ್ನು ದಾಖಲಿಸುವಂತೆ ಆದೇಶಿಸಿದ್ದು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.