ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ಮತ್ತು ಯಾವಾಗ ಮೃತಪಟ್ಟರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಈ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್ ಸಿಗಲಿದೆಯೇ?
ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡಾ ನೇತಾಜಿ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದರು ಎಂದು ಕೈ ತೊಳೆದುಕೊಂಡಿತ್ತು. ಆದರೆ ಪ್ಯಾರಿಸ್ ನ ಇತಿಹಾಸಕಾರರೊಬ್ಬರ ಹೇಳಿಕೆ ಇದೀಗ ಮತ್ತೊಂದು ಟ್ವಿಸ್ಟ್ ನೀಡುವ ಸಾಧ್ಯತೆ ನೀಡಿದೆ.
‘ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿರಲಿಲ್ಲ. 1947 ರಲ್ಲೂ ಅವರು ಜೀವಂತವಾಗಿದ್ದರು’ ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್ ಹೇಳಿದ್ದಾರೆ. 1947 ರ ಡಿಸೆಂಬರ್ 11 ರಂದು ಸಲ್ಲಿಕೆಯಾದ ಫ್ರೆಂಚ್ ಗುಪ್ತಚರ ವರದಿಯೊಂದನ್ನು ಉಲ್ಲೇಖಿಸಿ ಅವರು ಈ ವಾದ ಮಂಡಿಸಿದ್ದಾರೆ.
ತೈವಾನ್ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದು ಈ ವರದಿಯಲ್ಲಿ ಉಲ್ಲೇಖವಾಗಿಲ್ಲ. ಬದಲಿಗೆ 1947 ರ ಡಿಸೆಂಬರ್ 11 ರವರೆಗೆ ಅವರು ಅಪರಿಚಿತರಂತೇ ಬದುಕುತ್ತಿದ್ದರು ಎಂದು ಮೋರ್ ಹೇಳಿದ್ದಾರೆ. ನೇತಾಜಿ ಸಾವಿನ ವರದಿ ಪಡೆಯಲು ಕೇಂದ್ರ ಸರ್ಕಾರ ಮೂರು ಸಮಿತಿ ರಚಿಸಿತ್ತು. ಆ ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ