ಹೆಣ್ಣಿನ ಮಾನಕ್ಕಿಂತ ಮತಮಾನ ದೊಡ್ಡದು ಎಂದು ಹೇಳಿಕೆ ನೀಡಿ ವಿವಾದವನ್ನು ತಲೆಗೆಳೆದುಕೊಂಡಿದ್ದ ಶರದ್ ಯಾದವ್, ಮತ್ತೀಗ ತಮ್ಮ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ, ಓಟ್, ಮಹಿಳೆಯರ ಬಗ್ಗೆ ಪ್ರೀತಿ ಪ್ರೇಮವಿರಬೇಕೆಂದು ಹೇಳಿದ್ದೆ.ಪ್ರೀತಿ ಪ್ರೇಮವಿದ್ದಾಗ ಮಾತ್ರ ಉತ್ತಮ ಸರ್ಕಾರ, ಉತ್ತಮ ದೇಶ ನಿರ್ಮಾಣ ಸಾಧ್ಯ ಎಂಬುದು ನನ್ನ ಮಾತಿನರ್ಥವಾಗಿತ್ತು ಎಂದು ಅವರು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಪಾಟ್ಣಾದಲ್ಲಿ ನಿನ್ನೆ ಮತದಾನದ ಪಾವಿತ್ರ್ಯತೆ ಬಗ್ಗೆ ಮಾತನಾಡುತ್ತಿದ್ದ ಯಾದವ್, ಮಗಳ ಮಾನ ಹೋದರೆ, ಊರಿನ ಮಾನ ಹೋಗುತ್ತದೆ, 1 ಬಾರಿ ಮತ ಮಾರಾಟವಾದರೆ ಸಂಪೂರ್ಣ ದೇಶದ ಮಾನ ಹರಾಜಾಗುತ್ತದೆ, ಎಂದು ಹೇಳಿದ್ದರು.
ಘನತೆ ಗೌರವ ಕೊಡಬೇಕಿದ್ದ ಜನಪ್ರತಿನಿಧಿ, ದೇಶದ ನಾಯಕರೊಬ್ಬರು ಹೆಣ್ಣಿನ ಮಾನ ಹೋದ್ರು ಹೋಗಲಿ ಎಂದು ಹೊಣೆಗೇಡಿತನದ ಹೇಳಿಕೆ ನೀಡಿರುವುದೀಗ ಟೀಕೆಗೆ ಕಾರಣವಾಗಿದೆ.
ಈ ಹಿಂದೆ ಸಂಸತ್ತಿನಲ್ಲಿ ಹೆಣ್ಣಿನ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದ ಯಾದವ್, ಬಳಿಕ ತಮ್ಮ ಮಾತಿಗೆ ವಿಷಾದವನ್ನು ವ್ಯಕ್ತ ಪಡಿಸಿದ್ದರು.
ಹೆಣ್ಣಿನ ಘನತೆಯನ್ನು ಮತದ ಜತೆ ಹೋಲಿಸಿದ ಯಾದವ್ ಅವರ ಹೇಳಿಕೆಗೆ ಸ್ಪಷ್ಟೀಕರಣ ನೀಡುವಂತೆ ಮಹಿಳಾ ಆಯೋಗ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.