ನವದೆಹಲಿ :ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನಕ್ಸಲ್ ಬೆಂಬಲಿಗರನ್ನು ಮಂಗಳವಾರ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮೋದಿ ವಿರುದ್ಧ ಮಾವೋವಾದಿಗಳು ಸಂಚು ರೂಪಿಸಿದ್ದಾರೆಂಬ ಬಗ್ಗೆ ಪುಣೆ ಪೊಲೀಸರಿಗೆ ಜೂನ್ನಲ್ಲೇ ಮಹತ್ವದ ಸುಳಿವು ದೊರೆತಿತ್ತು. ಈ ಪ್ರಕರಣದ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು ಮಂಗಳವಾರ ಐದು ರಾಜ್ಯಗಳ 8 ನಕ್ಸಲ್ ಬೆಂಬಲಿಗರ ನಿವಾಸ ಮತ್ತು ಕಚೇರಿಗಳ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದಾರೆ. ಆ ವೇಳೆ, ಆಂಧ್ರದ ಮಾವೋವಾದಿ ಸಿದ್ಧಾಂತ ಬೆಂಬಲಿಗ ಹಾಗೂ ಬರಹಗಾರ ವರವರರಾವ್ರನ್ನು ಪುಣೆಯ ಅವರ ಮಗಳ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಉಳಿದ 8 ಜನರ ಪೈಕಿ ಐವರನ್ನು ತಡರಾತ್ರಿ ಬಂಧಿಸಿದ್ದು, ಇತರರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.
ಅಲ್ಲದೇ ಅಲ್ಲಿದ್ದ ಕೆಲವು ದಾಖಲೆಗಳು ಕೂಡ ಹಂಚಿಕೆಯಾಗಿದ್ದು, ಇವೆಲ್ಲವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಹಾಗೂ ಪುಸ್ತಕಗಳು ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.