ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗುಟ್ಟು ಕಾಯ್ದುಕೊಂಡಿದ್ದಕ್ಕೆ ಕಿಡಿಕಾರಿರುವ ಕಾಂಗ್ರೆಸ್, ಮಾಜಿ ಪ್ರಧಾನಿ ಸೇರಿದಂತೆ ಹಿರಿಯ ಅರ್ಥಶಾಸ್ತ್ರಜ್ಞರಿಂದ ರಹಸ್ಯ ಕಾಯ್ದುಕೊಂಡಿದ್ದು ಸರಿಯಲ್ಲ ಎಂದಿದೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನ್ನಾಡುತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ, ನೋಟು ನಿಷೇಧ ಹೇರುವುದಕ್ಕೂ ಮೊದಲು ಸರ್ಕಾರ ಕೊನೆಪಕ್ಷ ಅವರದೇ ಪಕ್ಷದ ಹಿರಿಯ ನಾಯಕ ಯಶವಂತ ಸಿನ್ಹಾ ಅವರನ್ನು ಸಂಪರ್ಕಿಸಬಹುದಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜತೆ ಮಾತನಾಡಬಹುದಿತ್ತು, ಎಂದು ಹೇಳಿದರು.
ಯಶವಂತ ಸಿನ್ಹಾ ವಾಜಪೇಯಿ ಸರ್ಕಾರದ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸಿನ್ಹಾ ಅವರನ್ನು ಭಾರತದ
ಭಾರತದ ಪ್ರಮುಖ ಆರ್ಥಿಕ ತಜ್ಞರೆಂದು ಪರಿಗಣಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.