ನವದೆಹಲಿ: ಸ್ವತಂತ್ರ ಭಾರತದಲ್ಲಿ ಅತೀ ಹೆಚ್ಚು ಟೀಕೆಗಳನ್ನು ಎದುರಿಸಿದ ಪ್ರಧಾನಿ ಎಂದು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಟೀಕೆಗಳು ದೇಶದ ವಿರುದ್ಧವಾಗಿದ್ದರೆ ಅದನ್ನು ವಾಕ್ ಸ್ವಾತಂತ್ರ್ಯ ಎನ್ನಲಾಗದು. ಆದರೆ ಮೋದಿಯಷ್ಟು ಕಟುವಾದ ಟೀಕೆಗಳನ್ನು ಎದುರಿಸಿದ ಇನ್ನೊಬ್ಬ ಪ್ರಧಾನಿ ಇಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.
“ಟೀಕೆಗಳಿಗೆ ಸದಾ ಸ್ವಾಗತ ಮತ್ತು ಅದನ್ನು ಸಹಿಸಬೇಕು. ಆದರೆ ಒಬ್ಬಾತ ಅದಕ್ಕೂ ಮೀರಿ ಟೀಕಿಸಿದರೆ ಮತ್ತು ದೇಶವನ್ನು ಗುರಿಯಾಗಿಸಿದರೆ ಅದನ್ನು ಕ್ಷಮಿಸಲಾಗದು ಅಥವಾ ಅದು ವಾಕ್ ಸ್ವಾತಂತ್ರ್ಯ ಎನ್ನಲಾಗದು” ಎಂದು ಅಮಿತ್ ಶಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ