ಬೆಂಗಳೂರು: ಜಗತ್ತಿನ ಅತೀ ಶ್ರೀಮಂತರಾದ ವಾರೆನ್ ಬಫೆಟ್, ಬಿಲ್ ಗೇಟ್ಸ್ ತಾವು ಸಂಪಾದಿಸಿದ ಬಹುಪಾಲನ್ನು ಬಡವರಿಗಾಗಿ ವಿನಿಯೋಗಿಸಿ ಸುದ್ದಿ ಮಾಡಿದ್ದರು. ಇದೀಗ ಭಾರತದ ಶ್ರೀಮಂತ ಉದ್ಯಮಿ ಇನ್ಫೋಸಿಸ್ ಸಿಇಒ ನಂದನ್ ನೀಲೇಕಣ್ ಇದೇ ದಾರಿಯಲ್ಲಿದ್ದಾರೆ.
ನಂದನ್ ನೀಲೇಕಣಿ ಕೂಡಾ ತಮ್ಮ ಅರ್ಧದಷ್ಟು ಸಂಪತ್ತನ್ನು ಬಡವರಿಗಾಗಿ ವಿನಿಯೋಗಿಸಲಾಗಿದೆ. ಇದನ್ನು ಹೇಗೆ ಬಳಸಬೇಕು, ಯಾರಿಗೆ ಕೊಡಬೇಕು ಎಂಬ ಬಗ್ಗೆ ಅವರ ಪತ್ನಿ ರೋಹಿಣಿ ನೀಲೇಕಣಿ ಯೋಜನೆ ರೂಪಿಸಲಿದ್ದಾರಂತೆ.
ಹಾಗಂತ ಸ್ವತಃ ನೀಲೇಕಣಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರಪಂಚದ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಬೆಂಗಳೂರಿನಲ್ಲಿ ನೀಲೇಕಣಿ ದಂಪತಿಯನ್ನು ಭೇಟಿಯಾಗಿದ್ದು. ಬಿಲ್ ಗೇಟ್ಸ್ ಪ್ರೇರಣೆಯಿಂದ ನೀಲೇಕಣಿ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಭಗವದ್ಗೀತೆಯ ಸಾಲಿನಂತೆ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ನೀಲೇಕಣಿ ದಂಪತಿಯ ತೀರ್ಮಾನಕ್ಕೆ ಬಿಲ್ ಗೇಟ್ಸ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ