ಆಸಾನ್ ಚಂಡಮಾರುತ ಆಂಧ್ರಪ್ರದೇಶ ಕಡಲ ತೀರಕ್ಕೆ ಅಪ್ಪಳಿಸಿದ ಬೆನ್ನಲ್ಲೇ ಸಮುದ್ರದಲ್ಲಿ ಸ್ವರ್ಣ ಲೇಪಿತ ರಥ ತೇಲಿಬಂದ ವಿಚಿತ್ರ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಳ್ಳಿ ಬಂದರು ಬಳಿಯ ಅಸೋರ್ ಎಂಬಲ್ಲಿ ರಥ ತೇಲಿ ಬಂದಿದ್ದು, ಸ್ಥಳೀಯ ಈಜುಗಾರರು ರಥವನ್ನು ದಡಕ್ಕೆ ತಂದಿದ್ದಾರೆ.
ಸ್ಥಳೀಯ ಪೊಲೀಸರು ಸ್ವರ್ಣ ಲೇಪಿತ ರಥ ಸಮುದ್ರದಲ್ಲಿ ಹೇಗೆ ತೇಲಿ ಬಂತು ಎಂದು ತಲೆಕೆಡಿಸಿಕೊಂಡಿದ್ದು, ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ರಥ ಬೇರೆ ದೇಶದಿಂದ ಇಲ್ಲಿಗೆ ತೇಲಿ ಬಂದಿರಬಹುದು. ಈ ಬಗ್ಗೆ ತನಿಖೆ ನಡೆಸಿ ಎಲ್ಲಿಂದ ಬಂದಿತು. ಹೇಗೆ ಬಂದಿತು ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.