ಬಾಲಕಿಯೊಂದರ ಕಿವಿಯ ಶಸ್ತ್ರಚಿಕಿತ್ಸೆ ಮಾಡಿದ ಇಂದೋರ್‌ನ ಮೈ ಹಾಸ್ಪಿಟಲ್‌ನ ನುರಿತ ವೈದ್ಯರು ಒಂದು ಕ್ಷಣಕ್ಕೆ ದಂಗಾಗಿದ್ದರು. 48 ಗಂಟೆಗಳ ಕಾಲ ಬಾಲಕಿಯ ಕಿವಿಯ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊರ ತೆಗೆದದ್ದು ಬರೊಬ್ಬರಿ 70 ಹುಳಗಳನ್ನು.
ಈ ಹುಳಗಳು ಬಾಲಕಿ ಕಿವಿಯ ಒಳಾಂಗಕ್ಕೆ ಮತ್ತು ಎಲುಬಿಗೂ ಹಾನಿಯನ್ನುಂಟು ಮಾಡಿದ್ದು ಆಕೆ ಈಗ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಶನಿವಾರ ಬಾಲಕಿ ರಾಧಿಕಾ(4) ಕಿವಿಯೊಳಗೆ ಸಹಿಸಲಾಗದ ನೋವು ಕಾಣಿಸಿಕೊಂಡಿದ್ದು ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು.
ಆಕೆಯ ಸಮಸ್ಯೆಯನ್ನು ಪತ್ತೆಹಚ್ಚಿದ ಇಎನ್‌ಟಿ ತಜ್ಞ ವೈದ್ಯರು ಸರ್ಜರಿ ಮಾಡಿ ಕಿವಿಯಿಂದ 30 ಹುಳಗಳನ್ನು ಹೊರ ತೆಗೆದಿದ್ದಾರೆ. ಆದರೂ ಆಕೆಯ ಕಿವಿ ನೋವು ಕಡಿಮೆಯಾಗದಾದಾಗ ಭಾನುವಾರ ಮತ್ತೊಂದು ಸರ್ಜರಿಯನ್ನು ಮಾಡಲಾಯಿತು. ಆಗ ಮತ್ತೆ 40 ಹುಳಗಳಿರುವುದು ಪತ್ತೆಯಾಯಿತು.
ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಕಿವಿಯೊಳಗೆ ಗಾಯವಾಗಿತ್ತು. ಅದನ್ನು ಆಕೆಯ ಪೋಷಕರು ನಿರ್ಲಕ್ಷಿಸಿದ್ದರು ಎಂದು ತಿಳಿದು ಬಂದಿದೆ.
ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಇಂತಹ ಕೇಸ್‌ನ್ನು ಹ್ಯಾಂಡಲ್ ಮಾಡಿರುವುದು ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ