ಮುಜಾಫುರ್ಪುರ್: ನಗರದಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ವಾಸವಾಗಿದ್ದ 29 ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವ ಹೀನಾಯ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ.
ಕೆಲ ಬಾಲಕಿಯರು ನೀಡಿದ ದೂರಿನ ಆಧಾರದ ಮೇರೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥ ದಿಲೀಪ್ ಕುಮಾರ್ ವರ್ಮಾ ನಾಪತ್ತೆಯಾಗಿದ್ದು ಆತನ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಪ್ರಮಾಣದಲ್ಲಿ ಸಾಮಾಜಿಕ ಸೇವೆ ಮಾಡಿಕೊಂಡಿದ್ದ ಆರೋಪಿ ಶಿಬಿರದ ಮುಖ್ಯಸ್ಥಾಗಿ ಬಡ್ತಿ ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು 10 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾಗಿರುವ ವರ್ಮಾ ವಿರುದ್ಧ ವಾರೆಂಟ್ ಜಾರಿಗೊಳಿಸಲಾಗಿದ್ದು, ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸಿಬಿಐಗೆ ಶಿಫಾರಸು ಮಾಡಿದೆ.
ಆರೋಪಿ ವರ್ಮಾ, ಕಬ್ಬಿಣದ ರಾಡ್ನಿಂದ ನನ್ನ ಗುಪ್ತಾಂಗದ ಮೇಲೆ ಹಲ್ಲೆ ಮಾಡಿದ್ದ. ಇಲ್ಲಿ ವಾಸವಾಗಿರುವ ಬಾಲಕಿಯರಿಗೆ ಡ್ರಗ್ಸ್ ನೀಡಿ ನಂತರ ಅತ್ಯಾಚಾರವೆಸಗಲಾಗುತ್ತಿತ್ತು ಎಂದು ಶಿಬಿರದಲ್ಲಿ ವಾಸವಾಗಿರುವ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.