ನೊಯ್ಡಾ : ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ದಿನ ನಮಾಜ್ ಮಾಡಬಾರದು ಎಂದು ಉತ್ತರಪ್ರದೇಶ ಪೊಲೀಸರು ನೊಯ್ಡಾದಲ್ಲಿರುವ ಎಲ್ಲಾ ಕಚೇರಿ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಿದ್ದಾರೆ.
ಇತ್ತೀಚೆಗೆ ನೋಯ್ಡಾ ಸೇರಿದಂತೆ ಇತರೆ ನಗರಗಳಲ್ಲಿ ಪಾರ್ಕ್ ಗಳಲ್ಲಿ ನಮಾಜ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಈ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ನೊಯ್ಡಾದಲ್ಲಿರುವ ಎಲ್ಲಾ ಕಚೇರಿ ಹಾಗೂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದು ಶುಕ್ರವಾರ ನಡೆಯುವ ನಮಾಜ್ ಅನ್ನು ಪಾರ್ಕ್ ಸೇರಿದಂತೆ ಇತರೆ ಯಾವುದೇ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸದೇ, ಕೇವಲ ಮಸೀದಿಗಳಲ್ಲೇ ಮಾತ್ರ ನಡೆಸಬೇಕೆಂದು ಮುಸ್ಲಿಂ ನೌಕರರಿಗೆ ಸೂಚನೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ಆದೇಶ ನೀಡಿದ್ದಾರೆ.
ಒಂದು ವೇಳೆ ಕಂಪನಿಗಳ ಉದ್ಯೋಗಿಗಳು ಪಾರ್ಕ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಕಂಡುಬಂದರೆ, ಅದಕ್ಕೆ ನೇರವಾಗಿ ಕಂಪನಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.