ವಾರಣಾಸಿ: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತಂತೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಲಿದೆ. ಈ ಪದ್ಧತಿ ನಿಲ್ಲಲು ಮುಸ್ಲಿಂ ಮಹಿಳೆಯೊಬ್ಬರು ಹನುಮಾನ್ ಚಾಲೀಸಾ ಓದಿ ಪ್ರಾರ್ಥನೆ ಸಲ್ಲಿಸಿದ್ದಾರೆ!
ಶಬಾನಾ ಎಂಬ ಮುಸ್ಲಿಂ ಮಹಿಳೆ ಹಿಂದೂಗಳ ಆರಾಧ್ಯ ದೇವರಾದ ಹನುಮಾನ್ ಚಾಲೀಸಾ ಓದಿ ಗಮನ ಸೆಳೆದಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎರಡೂ ಒಂದೇ. ಈ ಅನಿಷ್ಠ ಪದ್ಧತಿ ನಿಲ್ಲಲಿ ಎಂದು ಹನುಮಾನ್ ಚಾಲೀಸಾ ಓದುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಐದು ಮಂದಿ ವಿವಿಧ ಧರ್ಮಕ್ಕೆ ಸೇರಿದ ನ್ಯಾಯಾಧೀಶರುಗಳ ಪೀಠ ಇಂದಿನಿಂದ ತ್ರಿವಳಿ ತಲಾಖ್ ಪದ್ಧತಿ ನಿಷೇಧದ ಕುರಿತಂತೆ ವಿಚಾರಣೆ ನಡೆಸಲಿದ್ದಾರೆ. ಒಟ್ಟು ಏಳು ಅರ್ಜಿಗಳ ವಿಚಾರಣೆ ನಡೆಯಲಿದೆ. ಇದರಲ್ಲಿ ಐದು ಅರ್ಜಿಗಳು ಮುಸ್ಲಿಂ ಮಹಿಳೆಯರಿಂದ ಬಂದಿದೆ ಎನ್ನುವುದು ವಿಶೇಷ.
ತ್ರಿವಳಿ ತಲಾಖ್ ನಿಷೇಧಿಸುವ ಬಗ್ಗೆ ಸ್ವತಃ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿತ್ತು. ಇದೀಗ ಇದನ್ನು ಒಂದು ವಿಶೇಷ ಪ್ರಕರಣವೆಂದು ಭಾವಿಸಿ ಮುಖ್ಯ ನ್ಯಾಯಾಮೂರ್ತಿ ಕೇದಾರ್ ಜಾದವ್ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ