ನವದೆಹಲಿ: ಮುಸ್ಲಿಂ ಮಹಿಳೆಯರು 16 ವರ್ಷಕ್ಕೇ ತಾವು ಬಯಸಿದ ಹುಡುಗನೊಂದಿಗೆ ಮದುವೆಯಾಗುವುದಕ್ಕೆ ಕಾನೂನಿನ ಅಡ್ಡಿಯಿರುವುದಿಲ್ಲ ಎಂದು ಪಂಜಾಬ್, ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.
16 ವರ್ಷದ ಮುಸ್ಲಿಂ ಯುವತಿ ಮನೆಯವರ ಇಷ್ಟಕ್ಕೆ ವಿರೋಧವಾಗಿ ತಾನು ಬಯಸಿದ ಹುಡುಗನ ಜೊತೆ ಮದುವೆಯಾದ ಪ್ರಕರಣದ ಇತ್ಯರ್ಥ ಮಾಡಿದ ಕೋರ್ಟ್ ಈ ತೀರ್ಪು ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನನ್ವಯ ಮುಸ್ಲಿಂ ಮಹಿಳೆಯರು 16 ವರ್ಷಕ್ಕೆ ಮದುವೆಯಾಗಬಹುದು. ಇದಕ್ಕೆ ಕಾನೂನು ಪ್ರಕಾರವೂ ಊರ್ಜಿತವಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.