ನವದೆಹಲಿ: ಬಿಜೆಪಿ ಪರ ಮಾತನಾಡಿ ನಂತರ ಕ್ಷಮಾಪಣೆ ಕೇಳಿದ ಇಂಡಿಯ್ ಯೂನಿಯನ್ ಮುಸ್ಲಿಂ ಲೀಗ್ ಮಹಿಳಾ ಘಟಕದ ಅಧ್ಯಕ್ಷೆಯನ್ನು ವಜಾಗೊಳಿಸಲಾಗಿದೆ.
ಕಮುರುನ್ನಿಸಾ ಅನ್ವರ್ ವಜಾಗೊಂಡ ಮಹಿಳೆ. ಮುಸ್ಲಿಂ ಯೂನಿಯನ್ ಕ್ರಮವನ್ನು ಬಿಜೆಪಿ ಟೀಕಿಸಿದೆ. ಬಿಜೆಪಿ ಪರ ಮಾತನಾಡಿದ್ದಕ್ಕೆ ಅನ್ವರ್ ಕ್ಷಮಾಪಣೆ ಕೇಳಿದ್ದರು. ಆದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಅವರ ಬದಲಿಗೆ ಮರಿಯಮ್ ಅವರನ್ನು ನೇಮಿಸಲಾಗಿದೆ. ಬಿಜೆಪಿ ಕೇರಳದಲ್ಲಿ ಭಾರೀ ಪ್ರಭಾವಿ ಪಕ್ಷವಾಗಿ ಬೆಳೆಯುತ್ತಿದೆ ಎಂದು ಆ ಪಕ್ಷವನ್ನು ಅನ್ವರ್ ಹೊಗಳಿದ್ದರು. ಇದು ಅವರ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ರೀತಿ ಹೇಳಿಕೆ ನೀಡುವ ಮೊದಲು ತಾನು ತನ್ನ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದೆ ಎಂದು ಅನ್ವರ್ ವಾದಿಸಿದ್ದಾರೆ. ಆದರೆ ಅವರ ವಾದವನ್ನು ನಾಯಕರು ಒಪ್ಪುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ