Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಪವಾಸ ಅಂತ್ಯಗೊಳಿಸಲು ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ತಿಂಡಿಕೊಟ್ಟ ಗಗನಸಖಿ

ಉಪವಾಸ ಅಂತ್ಯಗೊಳಿಸಲು ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ತಿಂಡಿಕೊಟ್ಟ ಗಗನಸಖಿ
ಬೆಂಗಳೂರು , ಸೋಮವಾರ, 20 ಮೇ 2019 (17:37 IST)
ಸಾಂಸ್ಕೃತಿಕ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳಿಲ್ಲದ ಪರಸ್ಪರರ ಗೌರವ ನಮ್ಮ ದೇಶವನ್ನು ವ್ಯಾಖ್ಯಾನಿಸುತ್ತದೆ. ಈ ಘಟನೆಯು ನಿಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ನವದೆಹಲಿಯಿಂದ ಗೋರಖ್‌ಪುರ್‌ಗೆ ತೆರಳುವ ಏರಿಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಪ್ರಯಾಣಿಕ ರಿಫಾತ್ ಜವೈದ್‌, ರಂಜಾನ್‌ನಿಮಿತ್ಯ ಉಪವಾಸ ವ್ರತವನ್ನು ಆಚರಿಸುತ್ತಿದ್ದ. ಅಲ್ಲಿಗೆ ಬಂದ ಮಂಜುಳಾ ಎನ್ನುವ ಗಗನಸಖಿಗೆ ವ್ರತ ಅಂತ್ಯಗೊಳಿಸಲು ನೀರಿನ ಬಾಟಲ್‌ ಕೊಡುವಂತೆ ಕೇಳಿದ್ದಾನೆ.
 
ಗಗನಸಖಿ ಒಂದು ನೀರಿನ ಬಾಟಲ್‌ ಕೊಟ್ಟ ನಂತರ ರಿಫಾದ್ ಮತ್ತೊಂದು ಬಾಟಲ್‌ಗಾಗಿ ಕೋರಿಕೆ ಸಲ್ಲಿಸಿದ್ದಾನೆ. ಕೂಡಲೇ ತನ್ನ ಸೀಟಿಗೆ ತೆರಳುವಂತೆ ರಿಫಾದ್‌ಗೆ ಸೂಚಿಸಿದ ಗಗನಸಖಿ, ಕೆಲ ನಿಮಿಷಗಳಲ್ಲಿ ಮರಳಿ ಬಂದು ಎರಡು ಸ್ಯಾಂಡ್‌ವಿಚ್‌ಗಳಿರುವ ಆಹಾರ ಕೊಟ್ಟು ಇನ್ನೂ ಬೇಕಾದ್ರೆ ಕೇಳಿ ಎಂದು ಮನವಿ ಮಾಡಿದ್ದಾಳೆ.
 
ಗಗನಸಖಿಯ ಮಾತುಗಳನ್ನು ಕೇಳಿ ಆಕೆಯ ಹೃದಯ ವೈಶಾಲ್ಯತೆಯನ್ನು ಕಂಡು ಮನದುಂಬಿ ಬಂತು. ನನಗೆ ಹೆಚ್ಚಿನ ಸ್ಯಾಂಡ್‌ವಿಚ್ ಬೇಕಾಗಿರಲಿಲ್ಲ. ಇಷ್ಟೇ ನನಗೆ ಸಾಕಾಗಿತ್ತು. ಇದು ನಮ್ಮ ಭಾರತ ಎಂದು ರಿಫಾದ್ ತಮ್ಮ ಘಟನೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
 
ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ವೈರಲ್‌ ಆಗಿದ್ದು, ಗಗನಸಖಿ ಮಂಜುಳಾ ಹೃದಯ ವೈಶಾಲ್ಯತೆಯ ಬಗ್ಗೆ ಗುಣಗಾನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡಮಾನ್ ಗೆ ಮುಖಂಡರು ಹೋಗಿರೋದು ನಿಜ ಎಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ