ಎರಡನೇ ಅವಧಿಗೂ ಪುತ್ರ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ತಳ್ಳಿ ಹಾಕಿದ್ದಾರೆ. ಈ ಮೂಲಕ ಯಾದವ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಬಹಿರಂಗವಾಗಿದೆ.
ಚುನಾವಣೆ ಸನ್ನಿಹಿತವಾಗಿದ್ದು ಪ್ರಚಾರಕ್ಕೆ ಯಾರನ್ನು ಕಾಯುವುದು ಬೇಡ. ಪ್ರಚಾರವನ್ನು ಆರಂಭಿಸೋಣ ಎಂದು ಅಖಿಲೇಶ್ ಹೇಳುತ್ತಿದ್ದರೆ, ಅವರ ತಂದೆ ಮುಲಾಯಂ ಮಗನೇ ಮತ್ತೆ ಸಿಎಂ ಅಭ್ಯರ್ಥಿ ಎಂಬುದನ್ನು ಒಪ್ಪುತ್ತಿಲ್ಲ.
ಲಕ್ನೋನಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಮುಲಾಯಂ, ಪ್ರಚಾರದ ಸಂದರ್ಭದಲ್ಲಿ ಅಖಿಲೇಶರನ್ನು ಮುಖ್ಯಮಂತ್ರಿಯಾಗಿ ಬಿಂಬಿಸುವುದು ಬೇಡ. ಚುನಾಣಾ ಫಲಿತಾಂಶ ನಮ್ಮ ಪರವಾದರೆ ಶಾಸಕರೇ ತಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ಕುಟುಂಬದಲ್ಲಿ ಭಿನ್ನಮತವಿಲ್ಲ ಎಂದು ಯಾದವ್ ಕುಟುಂಬ ಎಷ್ಟು ಸ್ಪಷ್ಟನೆ ನೀಡಿದ್ದರೂ ಅದು ಸುಳ್ಳು ಎಂಬುದು ಮುಲಾಯಂ ಮಾತಿಂದ ಸ್ಪಷ್ಟವಾಗಿದೆ.
ಅಖಿಲೇಶ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ವೈಮನಸ್ಸು ತಾರಕಕ್ಕೇರಿದ್ದು, ಈ ಹಿನ್ನೆಲೆಯಲ್ಲಿ ಮಗನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡದಿರಲು ಮುಲಾಯಂ ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ