ಕೌಟುಂಬಿಕ ಕಲಹದಿಂದ ಜರ್ಜರಿತವಾಗಿರುವ ಯಾದವ್ ಪರಿವಾರದವರ ಮೇಲೆ ಗಾಯದ ಮೇಲೆ ಬರೆ ಎಳೆದಂತೆ ತೀವ್ರ ವಾಗ್ದಾಳಿ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ಮಗನಿಗಾಗಿ ಮುಲಾಯಂ ತಮ್ಮನನ್ನು ಬಲಿ ನೀಡಿದ್ದಾರೆ ಎಂದು ಕಿಚಾಯಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಮಾಯಾವತಿ, ಯಾದವ್ ಕುಟುಂಬದ ಮೇಲೆ ಮನಬಂದಂತೆ ಹರಿಹಾಯ್ದರು.
ಅಖಿಲೇಶ್ ಮತ್ತು ಮುಲಾಯಂ ಬಣದ ನಡುವೆ ನಡೆದ ಕದನ, ಸರ್ಕಾರದ ಆಡಳಿತ ವೈಫಲ್ಯದೆಡೆಗಿನ ಗಮನವನ್ನು ಬೇರೆಡೆ ಸೆಳೆಯಲು ಪಕ್ಷದ ಸ್ಥಾಪಕ (ಮುಲಾಯಂ) ಅವರ ಸಾರಥ್ಯದಲ್ಲಿ ನಡೆದ ಪೂರ್ವಯೋಜಿತ ನಾಟಕ ಎಂದು ಅವರು ವ್ಯಾಖ್ಯಾನಿಸಿದರು.
ತಮ್ಮ ಸಾರ್ವಜನಿಕ ಸಭೆ ಮತ್ತು ರ‍್ಯಾಲಿಗಳಲ್ಲಿ ಸಮಾಜವಾದಿ ಪಕ್ಷದ ವಿಭಜನೆಯನ್ನು ಹೈಲೈಟ್ ಮಾಡುತ್ತಿರುವ ಮಾಯಾವತಿ ಮತದಾರರು 2017ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಆಡಳಿತಕ್ಕೆ ಸೋಲುಣಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧವೂ ಗುಡುಗಿದ ಅವರು, ಕಾಂಗ್ರೆಸ್ ಬಹಳ ಹೀನಾಯ ಸ್ಥಿತಿಯಲ್ಲಿದ್ದು ತನ್ನದೇ ಆದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸ್ಥಿತಿಯಲ್ಲಿ ಅದಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ