ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ರಜೆ ದಿನಗಳಲ್ಲಿ ತಾಯಿಯನ್ನು ಭೇಟಿ ಮಾಡಲು ತೆರಳಿದ್ದಳು.ಅಲ್ಲಿಯೇ ಆರೋಪಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಾಲಕಿಯನ್ನು ಖರೀದಿಸಿದ ಕೇಂಡ್ರಾ ಎನ್ನುವ ವ್ಯಕ್ತಿಯೊಬ್ಬ ಆಕೆಯನ್ನು ವೇಶ್ಯಾವಾಟಿಕೆಗೆ 1 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದನು. ಗ್ರಾಹಕರ ಮುಂದೆ ನೃತ್ಯ ಮಾಡುವಂತೆ ಒತ್ತಾಯಿಸಲಾಗಿತ್ತು. ಇಲ್ಲವಾದಲ್ಲಿ ದೈಹಿಕ, ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರವೆಸಗಿದ ಆರೋಪಿಗೆ ತನ್ನ 12 ವರ್ಷ ವಯಸ್ಸಿನ ಪುತ್ರಿಯನ್ನು 1 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಲಕಿಯನ್ನು ಖರೀದಿಸಿದ ವ್ಯಕ್ತಿ ವೇಶ್ಯಾವಾಟಿಕೆಗೆ ತಳ್ಳುವ ಮೊದಲು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ವೇಶ್ಯಾವಾಟಿಕೆ ಜಾಲದಿಂದ ಪಾರಾಗುವಲ್ಲಿ ಯಶಸ್ವಿಯಾದ ಬಾಲಕಿ ಎನ್‌ಜಿಒ ಸಂಸ್ಥೆಯ ಮೂಲಕ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೆಲ ದಿನಗಳ ನಂತರ ಬಾಲಕಿ ತನ್ನ ಶಾಲೆಯ ಶಿಕ್ಷಕಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವಲ್ಲಿ ಯಶಸ್ವಿಯಾಗಿ ಘಟನೆಯ ವಿವರ ನೀಡಿದ್ದಾಳೆ. ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಂಡು ಹೋಗಿ ಪೊಲೀಸರ ಮತ್ತು ಎನ್‌ಜಿಓ ಸಹಾಯ ಪಡೆಯುವಂತೆ ಸಲಹೆ ನೀಡಿದ್ದಾಳೆ.
ವೇಶ್ಯಾವಾಟಿಕೆ ಜಾಲದಿಂದ ಪಾರಾಗುವಲ್ಲಿ ಯಶಸ್ವಿಯಾಗಿ ಎನ್‌ಜಿಓ ಮುಖ್ಯಸ್ಥ ನೆರವಿನಿಂದ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಬಾಲಕಿಯ ದೂರಿನ ಮೇರೆಗೆ ಆಕೆಯ ತಾಯಿ ಸೇರಿದಂತೆ ಹಲವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.