ನವದೆಹಲಿ: ಮಗು ಹೋಂ ವರ್ಕ್ ಮಾಡಲಿಲ್ಲವೆಂಬ ಕಾರಣಕ್ಕೆ ಹೆತ್ತತಾಯಿಯೇ ಆಕೆಯ ಕೈ ಕಾಲು ಕಟ್ಟಿ ಹಾಕಿ ಮನೆಯ ಛಾವಣೆಯಲ್ಲಿ ಉರಿಬಿಸಿಲಲ್ಲಿ ಮಲಗಿಸಿ ಶಿಕ್ಷೆ ಕೊಟ್ಟಿದ್ದಾಳೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.
ಮಗುವನ್ನು ಛಾವಣಿಯಲ್ಲಿ ಕಟ್ಟಿಹಾಕಿರುವುದು, ಉರಿಬಿಸಿಲು ತಾಳಲಾರದೇ ಮಗು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು ತಾಯಿಯ ವಿಳಾಸ ಪತ್ತೆ ಮಾಡಿ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ವಿಚಾರಿಸಿದಾಗ ಆರರಿಂದ ಏಳು ನಿಮಿಷ ಮಗುವನ್ನು ಛಾವಣಿಯಲ್ಲಿ ಮಲಗಿಸಿರುವುದಾಗಿ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಕ್ರಮ ಕೈಗೊಂಡಿದ್ದಾರೆ.