ನವದೆಹಲಿ: ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ, ಗೃಹಹಿಂಸೆ ಪ್ರಕರಣಗಳಲ್ಲಿ ಕೇವಲ ಗಂಡನಷ್ಟೇ ಅಲ್ಲ, ಅತ್ತೆ-ಮಾವನ ಪಾತ್ರವೂ ಇರುತ್ತದೆ. ಇದೇ ರೀತಿ ಸೊಸೆ ಸಾವಿಗೆ ಕಾರಣವಾದ ಅತ್ತೆಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಿರುಕುಳ ಕೊಟ್ಟಿದ್ದ 64 ವರ್ಷದ ಅತ್ತೆಯಿಂದಾಗಿ ಸೊಸೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒಬ್ಬ ಹೆಣ್ಣನ್ನು ಹೆಣ್ಣೇ ರಕ್ಷಿಸದಿದ್ದರೆ ಹೇಗೆ? ಹೀಗೆ ಮಾಡಿದರೆ ಮಹಿಳೆಯರೇ ದುರ್ಬಲರಾಗುತ್ತಾ ಹೋಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಅತ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೊಸೆಯ ಮೇಲೆ ಕ್ರೂರತ್ವ ತೋರಿಸಿದ್ದಕ್ಕೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸುವ ಸಾಧ‍್ಯತೆಯಿದೆ.