ಚಿಕ್ಕೋಡಿ : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಅವರ ಅಭಿಮಾನಿಯೊಬ್ಬರು ಒಡೆದ ಗಾಜುಗಳ ಮೇಲೆ ನಡೆದು ಹರಕೆ ತೀರಿಸಿದ್ದಾರೆ.
ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಸಂತೋಷ್ ಬೆಳಗಾವಿ ಮೋದಿಯವರ ಅಭಿಮಾನಿಯಾಗಿದ್ದು, ಇವರು ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಡೆದ ಗಾಜಿನ ಮೇಲೆ ನಡೆಯುತ್ತೇನೆಂದು ಹರಕೆ ಹೊತ್ತಿದ್ದರು.
ಇಂದು ಸಂಜೆ ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ಒಡೆದ ಗಾಜುಗಳ ಮೇಲೆ ನಡೆದು ಹರಕೆ ತೀರಿಸಿದ್ದಾರೆ.