ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ವಿದೇಶಿ ನೀತಿಗಳು ಕಭಿ ಖುಷಿ ಕಭಿ ಗಮ್ನಂತೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಗ ಸರಕಾರ ಯಾವ ಕಾರಣಕ್ಕೆ ಸಂಭ್ರಮ ಆಚರಿಸುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿಯವರ ಪಾಕಿಸ್ತಾನದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದ್ದರೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಕಬಿ ಖುಷಿ ಕಬಿ ಗಮ್ ಹಾಡನ್ನು ನೀವು ಕೇಳಿರಬಹುದು. ನವಾಜ್ ಷರೀಫ್ ಭಾರತಕ್ಕೆ ಬಂದಾಗ ಮೋದಿಗೆ ಸಂತೋಷವಾಗುತ್ತದೆ. ಇದೇ ಬಿಜೆಪಿ ವಿಪಕ್ಷದಲ್ಲಿದ್ದಾಗ, ಕಾಂಗ್ರೆಸ್ ಪಕ್ಷ ಪಾಕಿಸ್ತಾನಕ್ಕೆ ಲವ್ ಲೆಟರ್ಗಳನ್ನು ಬರೆಯುತ್ತಿದೆ ಎಂದು ಆರೋಪಿಸುತ್ತಿತ್ತು. ಇದೀಗ ನೀವು ಏನು ಮಾಡುತ್ತಿದ್ದೀರಿ? ಪಾಕಿಸ್ತಾನದವರ ವಿವಾಹಕ್ಕೆ ಹುಟ್ಟುಹಬ್ಬ ಆಚರಣೆಗೆ ಹಾಜರಾಗಿ, ಪಠಾನ್ಕೋಟ್ನಂತಹ ಉಗ್ರರ ದಾಳಿಗೆ ಆಹ್ವಾನ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಮೂಲಕ ದೇಶದ ಜನತೆಗೆ ಎರಡು ವರ್ಷದಲ್ಲಿ ಯಾವ ಸಾಧನೆ ಮಾಡಲಾಯಿತು ಎನ್ನುವ ಬಗ್ಗೆ ಮಾಹಿತಿ ನೀಡಲಿ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಪ್ರತಿ 45 ನಿಮಿಷಗಳಿಗೊಮ್ಮೆ ಭಾಷಣ ಮಾಡುತ್ತಾರೆ. ಆದರೆ, ಒಂದೇ ಒಂದು ವಿಪಕ್ಷಗಳ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮೋದಿ ಸರಕಾರಕ್ಕೆ ಮತ್ತು ಅವರ ಸಂಪುಟದ ಸಚಿವರಿಗೆ ನನ್ನೊಂದಿಗೆ ಚರ್ಚೆಗೆ ಬರಲು ಬಹಿರಂಗ ಸವಾಲ್ ಹಾಕುತ್ತೇನೆ. ಎರಡು ವರ್ಷಗಳ ಸಂಭ್ರಮವನ್ನು ಯಾಕೆ ಆಚರಿಸಲಾಗುತ್ತಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಲಿ. ದೇಶದ ಆರ್ಥಿಕತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಗುಡುಗಿದರು.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.