ಬಿಎಸ್‌ಪಿ ವರಿಷ್ಠೆ ಮಾಯಾವತಿಯನ್ನು ಅನುಮಾನದ ಹುಳ ಕಾಡುತ್ತಿದ್ದು, ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ಮೋದಿ ನಾನಾ ತಂತ್ರ ಬಳಸಬಹುದೆಂದು ಸಂಶಯಿಸಿದ್ದಾರೆ. ಉತ್ತರಪ್ರದೇಶ ಚುನಾವಣೆಗೆ ಮುಂಚಿತವಾಗಿ ಮೋದಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಯೋತ್ಪಾದನೆ ವಿಷಯ ಕುರಿತು ಪಾಕಿಸ್ತಾನದ ಜತೆ ಯುದ್ಧವನ್ನು ಕೂಡ ಆರಂಭಿಸಬಹುದು ಎಂದು ಅವರು ಗುಮಾನಿ ವ್ಯಕ್ತಪಡಿಸಿದರು.
ಮುಲಾಯಂ ಸಿಂಗ್ ಯಾದವ್ ಭದ್ರಕೋಟೆ ಪೂರ್ವ ಉತ್ತರ ಪ್ರದೇಶದಲ್ಲಿ ಮತದಾರರಿಗೆ ಎಚ್ಚರಿಕೆ ನೀಡಿದ ಅವರು ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ಮೊನಚುಗೊಳಿಸಿದರು. ಚುನಾವಣೆ ಲಾಭ ಪಡೆಯುವುದಕ್ಕಾಗಿ ಗಲಭೆಗಳಿಗೆ ಕೂಡ ಪ್ರಚೋದನೆ ನೀಡುವ ಮಟ್ಟಕ್ಕೆ ಅವು ಹೋಗಬಹುದು ಎಂದು ಮಾಯಾವತಿ ಅನುಮಾನ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಕೇಂದ್ರ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮೋದಿ ಸರ್ಕಾರ ಕಾಶ್ಮೀರ ಮತ್ತು ಭಯೋತ್ಪಾದನೆ ವಿಷಯಗಳನ್ನು ಪ್ರಧಾನವಾಗಿಟ್ಟುಕೊಂಡು ಪಾಕಿಸ್ತಾನದ ಜತೆ ಯುದ್ಧವನ್ನು ಕೂಡ ಘೋಷಿಸಬಹುದು ಎಂದು ಚುನಾವಣೆ ಸಭೆಯಲ್ಲಿ ಮಾಯಾವತಿ ಹೇಳಿದರು. ಅಜಮ್‌ಗಢವನ್ನು ಲೋಕಸಭೆಯಲ್ಲಿ ಮುಲಾಯಂ ಸಿಂಗ್ ಪ್ರತಿನಿಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ