ನವದೆಹಲಿ (ಅ. 23) : ದೇಶಾದ್ಯಂತ ಶತಕೋಟಿ ಕೋವಿಡ್-19 ಡೋಸ್ ಗಳನ್ನು ಹಾಕಲಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾ ಲಸಿಕೆ ಉತ್ಪಾದಕರ ಜೊತೆ ಸಂವಾದ ನಡೆಸಲಿದ್ದಾರೆ.
ಈ ಮಾತುಕತೆ ವೇಳೆ ಕೊರೋನಾ ಲಸಿಕೆ ತಯಾರಕರ ಅನುಭವವನ್ನು ಕೇಳಲಿದ್ದಾರೆ. ಅಲ್ಲದೆ ಲಸಿಕೆ ಸಂಶೋಧನೆ ಮುಂದುವರೆಸುವ ಬಗ್ಗೆ ಕೂಡ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.