ನವದೆಹಲಿ : ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಪ್ರಧಾನಿ ಮೋದಿ ಇದೀಗ ದೇಶಿಯ ಆ್ಯಪ್ ತಯಾರಿಸಲು ಭಾರತದ ಜೊತೆ ಕೈಜೋಡಿಸುವಂತೆ ದೇಶದ ಯುವ ಪೀಳಿಗೆಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಇಂದು ಮೇಡ್ ಇನ್ ಇಂಡಿಯಾ ಆ್ಯಪ್ ಮತ್ತು ಸ್ಟಾರ್ಟ್ ಅಪ್ ಮಾಡಲು ಯುವ ಸಮುದಾಯದಲ್ಲಿ ಉತ್ಸಾಹವಿದೆ. ಹೀಗಾಗಿ ಜೊತೆ ಸೇರಿ ಸಂಶೋಧನೆಯ ಚಾಲೆಂಜ್ ಸ್ವೀಕರಿಸಿ. ನಿಮ್ಮ ಸಂಶೋಧನೆಯ ಪ್ರೊಡೆಕ್ಟ್ ಅಥವಾ ಇದರಿಂದ ದೇಶಕ್ಕೆ ಒಳ್ಳೆಯದನ್ನು ಮಾಡೋ ಉದ್ದೇಶವಿದ್ದರೆ ಸೇರಿಕೊಳ್ಳಿ .ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ’ ಎಂದು ತಿಳಿಸಿದ್ದಾರೆ.