Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈದ್ಯರು ಅಲಭ್ಯರೆಂದು ತಾನೇ ಶಸ್ತ್ರಚಿಕಿತ್ಸೆ ಮಾಡಿದ ಶಾಸಕ

ವೈದ್ಯರು ಅಲಭ್ಯರೆಂದು ತಾನೇ ಶಸ್ತ್ರಚಿಕಿತ್ಸೆ ಮಾಡಿದ ಶಾಸಕ
ಐಜ್ವಾಲ್ , ಶನಿವಾರ, 25 ಫೆಬ್ರವರಿ 2017 (14:28 IST)
ಕೆಲವರಿಗೆ ಕರ್ತವ್ಯದ ಮುಂದೆ ಉಳಿದದೆಲ್ಲವೂ ನಗಣ್ಯವಾಗಿರುತ್ತದೆ. ತಮ್ಮ ಬದ್ಧತೆಯ ಮೂಲಕ ಇತರರಿಗೆ ಅವರು ಮಾದರಿ ಎನ್ನಿಸಿಕೊಳ್ಳುತ್ತಾರೆ. ಇಂತಹ ಮಹಾನ್ ಗುಣಕ್ಕೆ ಉದಾಹರಣೆ ಮಿಜೋರಾಂನ  ಶಾಸಕ ಡಾ. ಕೆ ಬಿಚುವಾ. 
ಇಷ್ಟಕ್ಕೂ ನಡೆದಿದ್ದಾದರೂ ಏನು: ತೀವ್ರ ಹೊಟ್ಟೆನೋವಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  35 ವರ್ಷದ ಗರ್ಭಿಣಿ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿತ್ತು. ಇಲ್ಲಿದಿದ್ದರೆ ಆಕೆಯ ಪ್ರಾಣಕ್ಕೆ ಅಪಾಯವಿತ್ತು. ಆದರೆ ವೈದ್ಯರು ಬೇರೆ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಈ ಕುರಿತು ಯಾರೋ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯತ್ತಿದ್ದಂತೆ ತಮ್ಮ ರಾಜಕೀಯದ ಕೆಲಸಗಳನ್ನೆಲ್ಲ ಬದಿಗೊತ್ತಿದ್ದ ಶಾಸಕರು ನೇರವಾಗಿ ಆಸ್ಪತ್ರೆಗೆ ತೆರಳಿ ಶಸ್ಚ್ರಚಿಕಿತ್ಸೆ ನಡೆಸಿದ್ದಾರೆ.
 
ಶಾಸಕರು ಶಸ್ತ್ರಚಿಕಿತ್ಸೆ ಮಾಡಲು ಹೇಗೆ ಸಾಧ್ಯ? ಎಂದು ಅಚ್ಚರಿ ಪಡಬೇಡಿ. ಏಕೆಂದರೆ,, ಶಾಸಕರಾಗುವ ಮುನ್ನ 20 ವರ್ಷಗಳ ಕಾಲ ಬಿಚುವಾ ಸರ್ಕಾರಿ ವೈದ್ಯರಾಗಿ ಕೆಲಸ ಮಾಡಿದವರು. ಮೀಜೋ ನ್ಯಾಷನಲ್‌ ಫ್ರಂಟ್‌'ನ ಶಾಸಕರಾಗಿರುವ ಡಾ| ಕೆ. ಬೀಚುವಾ ಶಾಸಕರಾದ ಬಳಿಕ ಅಂದರೆ 38 ತಿಂಗಳ ಅವಧಿಯಲ್ಲಿ ಮಾಡಿದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ.
 
ಶಾಸಕರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಬಸ್‌ಗೆ ಬೆಂಕಿ: ಗಾಯಗೊಂಡಿದ್ದ ಮಮತಾ ಸಾವು