ಇತ್ತೀಚೆಗೆ ಎ.ಕೆ. 47 ಗನ್ ಜೊತೆ ನಾಪತ್ತೆಯಾಗಿದ್ದ ಯೋಧ ಜಹೂರ್ ಅಹಮ್ಮದ್ ತೋಕರ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಈ ಬಗ್ಗೆ ಇಮೇಲ್ ಹೇಳಿಕೆ ಬಿಡುಗಡೆ ಮಾಡಿರುವ ಹಿಜ್ಬುಲ್ ಮುಜಾಹಿದ್ದೀನ್`ನ ವಕ್ತಾರ ಸಲೀಮ್ ಹಶ್ಮಿ, `ಭಾರತ ಸೇನೆಯಿಂದ ನಾಪತ್ತೆಯಾಗಿರುವ ಯೋಧ ಜಹೂರ್ ಅಹಮ್ಮದ್ ತೋಕರ್ ಹಿಜ್ಬುಲ್ ಸಂಘಟನೆ ಸೇರಿದ್ದಾರೆ. ಕಾಶ್ಮೀರ ಪ್ರತ್ಯೇಕತಾ ಹೋರಾಟ ಹತ್ತಿಕ್ಕಲು ಪ್ರಧಾನಿ ನರೇಂದ್ರಮೊದಿ ಮತ್ತು ಭಾರತದ ಏಜೆನ್ಸಿಗಳು ಪಕ್ಷಪಾತಿ ಮಾಧ್ಯಮಗಳನ್ನ ಬಳಸಿಕೊಂಡು ಕಾಶ್ಮೀರದಲ್ಲಿ ಅಲ್ ಕೈದಾ ಮತ್ತು ಐಸಿಸ್ ಸಂಘಟನೆಗಳು ಸಕ್ರಿಯವಾಗಿವೆ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದ್ಧಾನೆ.
ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಆ ರೀತಿಯ ಯಾವುದೇ ಸಂಘಟನೆಗಳಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾನೆ. ಯೋಧ ತೋಕುರ್ ನಿರ್ಧಾರವನ್ನ ಪ್ರಶಂಸಿಸಿದ್ದು, ಜೊತೆಗೆ ಹಿಜ್ಬುಲ್ ಸಂಘಟನೆ ಮುಖ್ಯಸ್ಥ ಸಲಾಹುದ್ದೀನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯೋಧ ತೋಕುರ್`ಗೂ ಭಯೋತ್ಪಾದಕ ಶ್ರೇಣಿ ನೀಡಲಾಗಿದೆ ಎಂದು ಹೇಳಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ