Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದ ನಗರಗಳ ಸುರಕ್ಷತೆಯನ್ನು ಆಫ್ರಿಕಾಗೆ ಹೋಲಿಸಿದ ಸಚಿವ ಮಹೇಶ್ ಶರ್ಮಾ

ಭಾರತದ ನಗರಗಳ ಸುರಕ್ಷತೆಯನ್ನು ಆಫ್ರಿಕಾಗೆ ಹೋಲಿಸಿದ ಸಚಿವ ಮಹೇಶ್ ಶರ್ಮಾ
ನವದೆಹಲಿ , ಶನಿವಾರ, 28 ಮೇ 2016 (12:53 IST)
ಭಾರತದ ನಗರಗಳ ಜನತೆಯ ಸುರಕ್ಷತೆಯನ್ನು ಆಫ್ರಿಕಾ ನಗರಗಳಿಗೆ ಹೋಲಿಸಿದ ಸಾಂಸ್ಕ್ರತಿಕ ಖಾತೆ ಸಚಿವ ಮಹೇಶ್ ಶರ್ಮಾ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
 
ದೆಹಲಿಯಲ್ಲಿ ಕಾಂಗೋ ವಿದ್ಯಾರ್ಥಿಯನ್ನು ಹತ್ಯೆಗೈದಿರುವ ಘಟನೆ ಭಾರತದ ವಿರುದ್ಧ ಕಾಂಗೋದಲ್ಲಿ ಆಕ್ರೋಶ ಮೂಡಿಸಿರುವಂತೆಯೇ ಸಚಿವ ಶರ್ಮಾ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. 
 
ಭಾರತ ದೊಡ್ಡ ರಾಷ್ಟ್ರವಾಗಿದ್ದು ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರನ್ನು ತರುತ್ತವೆ. ಇದೊಂದು ದುರದೃಷ್ಟಕರ ಘಟನೆ. ಆಫ್ರಿಕಾ ಕೂಡಾ ಸುರಕ್ಷಿತ ರಾಷ್ಟ್ರವಲ್ಲ. ಇಂತಹ ಘಟನೆಗಳು ವಿಶ್ವದ ಇತರ ಭಾಗಗಳಲ್ಲೂ ನಡೆಯುತ್ತವೆ ಎಂದು ಹೇಳಿಕೆ ನೀಡಿದ್ದಾರೆ.
 
ನಾನು ದಕ್ಷಿಣ ಆಫ್ರಿಕಾಗೆ ತೆರಳಿದ್ದಾಗ ಸುರಕ್ಷತೆಯ ಕಾರಣಗಳಿಂದಾಗಿ ಬೆಳಗಿನ ಜಾವ 6 ಗಂಟೆಗೆ ವಾಕಿಂಗ್ ಹೋಗುವುದನ್ನು ನಿಲ್ಲಿಸಿದ್ದೆ. ರಾತ್ರಿಯ ಊಟದ ನಂತರವೂ ವಾಕಿಂಗ್‌ ಹೋಗುವುದನ್ನು ನಿಲ್ಲಿಸುವಂತೆ ಹೋಟೆಲ್ ಸಿಬ್ಬಂದಿಗಳು ನನಗೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ. 
 
ದಕ್ಷಿಣ ದೆಹಲಿಯ ವಸಂತ ಕುಂಜ ಪ್ರದೇಶದಲ್ಲಿ ಕಾಂಗೋ ದೇಶದ ವಿದ್ಯಾರ್ಥಿಯನ್ನು ಹತ್ಯೆಗೈದಿರುವುದರಿಂದ ಆಕ್ರೋಶಗೊಂಡ ಆಫ್ರಿಕಾ ರಾಯಭಾರಿ ಕಚೇರಿ ಕೇಂದ್ರ ಸರಕಾರಕ್ಕೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿತ್ತು. ನಂತರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೈಯಕ್ತಿಕವಾಗಿ ನೀಡಿದ ಭರವಸೆಯಿಂದಾಗಿ ವಿವಾದ ತಣ್ಣಗಾಗಿತ್ತು ಎನ್ನಲಾಗಿದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ಫಲಿತಾಂಶ ಪ್ರಕಟ: ವೈದ್ಯಕೀಯದಲ್ಲಿ ಅನಂತ್ ಜಿ.ರಾಜ್ಯಕ್ಕೆ ಪ್ರಥಮ