ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವ ಸ್ಟಾರ್ ನಟ ಕಮಲ್ ಹಾಸನ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಎಸ್.ಪಿ.ವೇಲುಮಣಿ, ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.
ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಿದೆಯೇ? ಒಂದು ವೇಳೆ, ಇದ್ದಲ್ಲಿ ಸಾಬೀತುಪಡಿಸಲಿ ಎಂದು ಪೌರಾಡಳಿತ ಖಾತೆ ಸಚಿವರು ಸವಾಲ್ ಹಾಕಿದ್ದಾರೆ.
ಚಲನಚಿತ್ರಗಳಿಗೆ ಪಡೆದಿದ್ದ ಹಣದ ತೆರಿಗೆ ವಿವರಗಳನ್ನು ಬಹಿರಂಗಪಡಿಸಲು ಸಿದ್ಧರಿದ್ದೀರಾ ಎಂದು ಸಚಿವ ವೇಲುಮಣಿ ಕಮಲ್ ಹಾಸನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶ್ರೇಷ್ಠನಟರಾದ ಕಮಲ್ ಹಾಸನ್, ಕೆಲ ದಿನಗಳ ಹಿಂದೆ ರಾಜ್ಯ ಸರಕಾರದ ಹಲವಾರು ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದರು.
ಕಮಲ್ ಹಾಸನ್ ರಾಜ್ಯ ಸರಕಾರದ ವಿರುದ್ಧ ಯಾವತ್ತೂ ಇಂತಹ ಆರೋಪಗಳು ಮಾಡಿಲ್ಲ. ಇದೀಗ ಯಾವುದೇ ದಾಖಲೆಗಳಿಲ್ಲದೇ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮುನ್ನ ದಾಖಲೆಗಳನ್ನು ಸಂಗ್ರಹಿಸಲಿ ಎಂದು ಸಲಹೆ ನೀಡಿದ್ದಾರೆ.
ಆಪಾದನೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ (ಅಮ್ಮ) ನಾಯಕ ಮತ್ತು ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಎಂ. ತಂಬಿದೂರೈ ಅವರು, ಒಂದು ವೇಳೆ ಕಮಲ್‌ಹಾಸನ್ ಬಳಿ ದಾಖಲೆಗಳಿದ್ದಲ್ಲಿ ಕೋರ್ಟ್ ಮೋರೆ ಹೋಗಲು ಯಾರು ತಡೆದಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.